ಸಿರಿಗೇರಿ: ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ ಅನೇಕ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಸೃಷ್ಟಿಸಿದ್ದರು ಎಂದು ಹಿಟ್ನಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಟಿ.ಎಚ್.ಬಸವರಾಜ್ ಹೇಳಿದರು.
ಗ್ರಾಮದಲ್ಲಿ ಬಸವ ಬಳಗದಿಂದ ಇತ್ತೀಚೆಗೆ ಆಯೋಜಿಸಿದ್ದ ಬಸವಣ್ಣ ಅವರ 892 ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಬಸವಣ್ಣ ವಚನ ಸಾಹಿತ್ಯದ ಮೂಲಕ ತಮ್ಮ ಅನುಭವವನ್ನು ಇಡೀ ವಿಶ್ವಕ್ಕೆ ಸಾರಿದ ಮೇಧಾವಿಯಾಗಿದ್ದಾರೆ.
ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ವಚನ ಭಾವಾರ್ಥಗಳ ಅಧ್ಯಯನಕ್ಕೆ ಒತ್ತು ನೀಡಬೇಕಿದೆ. ಪಂಚ ಗಣಾಧೀಶರು ತಲೆಯ ಮೇಲೆ ವಚನಗಳನ್ನು ಇಟ್ಟುಕೊಂಡು ವಚನ ಧರ್ಮ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದರು.
ವಿರಕ್ತ ಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಯದ್ದಲದೊಡ್ಡಿ ಆಶೀರ್ವಚನ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ಜೆ. ಬಸವರಾಜಪ್ಪ ಮಾತನಾಡಿದರು. ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.
ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಬಸವದಳ ಹಂದ್ರಾಳ್ ಅವರಿಂದ ಕ್ರಾಂತಿಯೋಗಿ ಬಸವಣ್ಣ ನಾಟಕ ಪ್ರದರ್ಶನಗೊಂಡಿತು.
ಶ್ರೀ ಬಸವಭೂಷಣ ಸ್ವಾಮೀಜಿ, ಗ್ರಾ.ಪಂ.ಉಪಾಧ್ಯಕ್ಷೆ ರಾಜಮ್ಮ ಹುಲಗಪ್ಪ, ಪ್ರಮುಖರಾದ ಬಿ.ಮಹಾರುದ್ರ ಗೌಡ, ಎಸ್.ಎನ್. ಪನ್ನರಾಜ್, ಹೇಮಯ್ಯ ಸ್ವಾಮಿ, ಎಸ್.ಎಂ.ಅಡಿವೆಯ್ಯಸ್ವಾಮಿ, ಬಸನಗೌಡ ಹಂದ್ರಾಳ್, ಉಮಾಪತಿ ಗೌಡ, ರವಿಶಂಕರ್, ಜಿ.ಕೆ.ನಾಗರಾಜ್, ಜೆ.ಮಲ್ಲಿಕಾರ್ಜುನಗೌಡ, ಗೋಡೆ ಚಂದ್ರಶೇಖರಗೌಡ, ಹಾಗಲೂರು ಮಲ್ಲನಗೌಡ, ಬಿ.ವೀರಭದ್ರಗೌಡ, ಬಿ.ಅಮರೇಶ ಗೌಡ, ಆರ್.ನಾಗರಾಜ ಗೌಡ ಎಸ್.ಎನ್.ಪಂಪಾಪತಿ, ಬಸವ ಬಳಗ ಅಧ್ಯಕ್ಷ ಡಾ. ಶಿವಪ್ರಸಾದ್, ಶಶಿಧರ, ಗಣೇಶಪ್ಪ, ಬಿ.ಆರ್.ಶಿವುಕುಮಾರ್, ಡಾ. ಕಳಕಪ್ಪ, ಅಕ್ಕನ ಬಳಗದ ಸುಮಂಗಳ ಬಳೆಗಾರ ಇದ್ದರು.