ಜಿಲ್ಲೆ

ನೀರಿನ ಸಮಸ್ಯೆ ಪರಿಶೀಲಿಸಿದ ಅಧಿಕಾರಿಗಳು

ಸಿರಿಗೆರೆ: ಗ್ರಾಮದಲ್ಲಿನ ಒಂದು ಮೋಟರ್ ದುರಸ್ತಿ ಪಡಿಸಿ ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರಮಸಾಗರದ ಪಿಎಸ್‌ಐ ಟಿ.ರಾಜು ತಿಳಿಸಿದ್ದಾರೆ.

ಬುಧವಾರದಂದು ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಓವರ್ ಟ್ಯಾಂಕ್ ಬೋರ್‌ವೆಲ್‌ನಿಂದ ದೂರವಾಗಿದ್ದು, ಪೈಪ್‌ಲೈನ್ ಸಹ ದೂರವಿದೆ. ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಟ್ಯಾಂಕ್‌ಗೆ ನೀರು ಬರುತ್ತಿಲ್ಲ. ಕೊಳವೆಬಾವಿ ಹತ್ತಿರಕ್ಕೆ ಪೈಪ್‌ಲೈನ್ ಕಡಿಮೆ ಮಾಡಿ ನೀರು ಸರಬರಾಜು ಮಾಡಿ. ಲಾಕ್‌ಡೌನ್ ಮುಗಿದ ನಂತರ ನೀರಿನ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಬಗೆಹರಿಸೋಣ ಎಂದರು.

ಚಿತ್ರದುರ್ಗದ ವೃತ್ತ ನಿರೀಕ್ಷಕ ಬಿ.ವಿ.ಗಿರೀಶ್, ಜಿಲ್ಲಾ ಎಕ್ಸಿಕ್ಯೂಟಿವ್ ಆಫೀಸರ್ ಎಚ್.ಕೃಷ್ಣಾನಾಯಕ್, ಜಿಲ್ಲಾ ಯೋಜನಾಧಿಕಾರಿ ಧನಂಜಯ, ಗ್ರಾಪಂ ಪಿಡಿಒ ಜಯಶೀಲ, ಸದಸ್ಯರು, ಗ್ರಾಮಸ್ಥರಿದ್ದರು.