ಜಿಲ್ಲೆ

ತಾಳಿ ಭಾಗ್ಯ ಕೇಳಿದ ಸಿರಿಗೆರೆ ಸ್ವಾಮೀಜಿ

Davangere - Desk - Mahesh Babu E

ಸಿರಿಗೆರೆ: ನಮಗೆ ಮೆಡಿಕಲ್ ಕಾಲೇಜ್ ಬೇಕಿಲ್ಲ. ಆದರೆ, ನಮ್ಮ ಮಹಿಳೆಯರಿಗೆ ತಾಳಿ ಭಾಗ್ಯ ಬೇಕು ಎಂದು ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಗುರುಶಾಂತೇಶ್ವರ ಭವನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 31ನೇ ವರ್ಷದ ಶ್ರದ್ಧಾಂಜಲಿಯ 4ನೇ ದಿನದ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

1984ಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಬಳಿ ನಮ್ಮದು ಮೆಡಿಕಲ್ ಕಾಲೇಜ್ ಆರಂಭದ ಪ್ರಸ್ತಾಪವಿಲ್ಲ. ಆದರೆ, ಮಹಿಳೆಯರ ಮಾಂಗಲ್ಯ ಉಳಿಸುವ ಮದ್ಯಪಾನ ಮುಕ್ತ ನಾಡು ಕಟ್ಟುಲು ಮುಂದಾಗಿ ಎಂದು ಹೇಳಿದ್ದೆವು. ಅದೇ ಮಾತನ್ನು ಮಠಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಮಾಡುತ್ತೇವೆ ಎಂದು ಹೇಳಿರುವ ಸಚಿವ ಶರಣ ಪಾಟೀಲ್ ಅವರಿಗೂ ಅನ್ವಯಿಸುತ್ತದೆ ಎಂದು ಶ್ರೀಗಳು ಹೇಳಿದರು.

ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಮನುಷ್ಯ ನೆಮ್ಮದಿ ಮೂಲಕ ಬದುಕುವುದನ್ನು ವಚನ ಸಾಹಿತ್ಯದ ಮೂಲಕ ದಾರಿ ತೋರಿಸಿದ ಬಸವಾದಿ ಶರಣರು ಸಮಾನತೆ, ಪ್ರೀತಿ, ವಿಶ್ವಾಸದ ಪರಂಪರೆಯನ್ನು ತರಳಬಾಳು ಮಠ ಕೊಟ್ಟಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಕಲ್ಯಾಣ ಕರ್ನಾಟಕ ಕಟ್ಟುವಲ್ಲಿ ಶ್ರಮಿಸುತ್ತಿದೆ ಎಂದರು.