ಜಿಲ್ಲೆ

ಎಸ್‌ಡಿಎಂಸಿ ಕಾರ್ಯಾಗಾರ

Chitradurga

ಸಿರಿಗೆರೆ: ಶಾಲೆಗಳ ಅಭಿವೃದ್ಧಿಗಾಗಿ ಆಯಾಯ ಶಾಲೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು ಶಾಲಾ ದಾಖಲಾತಿಗಳ ಮತ್ತು ಹಾಜಾರಾತಿ ಪರಿಶೀಲಿಸಿ ಉತ್ತಮ ಫಲಿತಾಂಶ ಪಡೆಯುವ ಹಾಗೆ ಸಹಕರಿಸಿ ಎಂದು ಸಿಆರ್‌ಪಿ ಪ್ರದೀಪ್ ತಿಳಿಸಿದರು.

ದೊಡ್ಡಾಲಘಟ್ಟ ಕ್ಲಸ್ಟರ್‌ನ ಕೋಣನೂರು, ಬೊಮ್ಮವ್ವನಾಗ್ತಿಹಳ್ಳಿ ಹಾಗೂ ಚಿಕ್ಕೇನಹಳ್ಳಿ ಶಾಲೆಯ ಒಟ್ಟು 54 ಸದಸ್ಯರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಓ.ಎಚ್.ರಂಗಪ್ಪ, ಅಕ್ಷರ ಫೌಂಡೇಶನ್‌ನ ಸಂಯೋಜಕ ಮಧುಸೂದನ್, ಎಚ್.ಸುಲೋಚನಾ, ಜಿ.ಎಸ್.ರೇವಣಸಿದ್ದಪ್ಪ ಇತರರಿದ್ದರು.