ಜಿಲ್ಲೆ

ಸಿರಿಗೆರೆ ಹಾಲು ಉತ್ಪಾದಕರ ಸಂಘ ಪ್ರಗತಿ

Davangere - Desk - Mahesh Babu E

ಸಿರಿಗೆರೆ: ಚಿತ್ರದುರ್ಗ ತಾಲೂಕಿನಲ್ಲಿಯೇ ಸಿರಿಗೆರೆ ಹಾಲು ಉತ್ಪಾದಕರ ಸಂಘ ಅತ್ಯುತ್ತಮ ಪ್ರಗತಿ ಸಾಧಿಸಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟ ಚಿತ್ರದುರ್ಗದ ವಿಭಾಗದ ಉಪ ವ್ಯವಸ್ಥಾಪಕ ಡಾ.ಸಂಜಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿಯೇ ಶಿಮುಲ್ ನಿರ್ದೇಶಕ ಸಿರಿಗೆರೆಯ ಪಿ.ತಿಪ್ಪೇಸ್ವಾಮಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿರುತ್ತಾರೆ ಎಂದು ತಿಳಿಸಿದರು.

ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ, ಡೈರಿಗೆ ಹಾಲು ಹಾಕುವ ಎಂ.ಎಸ್.ನಂದನ್ ಅವರಿಗೆ ಪದಕ ನೀಡಿ ಗೌರವಿಸಾಯಿತು.

ಸಂಘದ ಅಧ್ಯಕ್ಷ ಎಸ್.ನರೇಂದ್ರ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವಿಜಯ್ ಕುಮಾರ್, ವಿಸ್ತರಣಾಧಿಕಾರಿ ವಿನುತ್ ಕುಮಾರ್, ನಾಗೇಂದ್ರಪ್ಪ, ಬಿ.ಎಂ.ಯೋಗೇಶ್, ಬಿ.ಎಸ್.ಬಸವರಾಜ್, ಮಂಜುನಾಥ್, ಕೆ.ಶಶಿಕಲಾ, ನಿರ್ಮಲಾ, ಎಂ.ಮಮತಾ ಇದ್ದರು.