ಜಿಲ್ಲೆ

ಸಿರಿಗೆರೆಯಲ್ಲಿ ಇಂದು ಲಿಂ.ಶ್ರೀ ಶ್ರದ್ಧಾಂಜಲಿ

ಸಿರಿಗೆರೆ: ತರಳಬಾಳು ಮಠದ ಚರಪಟ್ಟಾಧ್ಯಕ್ಷ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ 12ನೇ ಶ್ರದ್ಧಾಂಜಲಿ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವ ಗ್ರಾಮದ ಐಕ್ಯಮಂಟಪದಲ್ಲಿ ಫೆ.15ರ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಬೆಳಗ್ಗೆ 8ಕ್ಕೆ ಶ್ರೀಗಳ ಗ್ರಾಮದಲ್ಲಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ತಿಳಿಸಿದ್ದಾರೆ.