ಜಿಲ್ಲೆ

ಮದುವೆ, ಜಾತ್ರೆ, ಸಂತೆ ಬಂದ್

ಸಿರಿಗೆರೆ: ಕರೊನಾ ಇನ್ನಿತರ ಸಾಂಕ್ರಾಮಿಕ ರೋಗಗಳ ತಡೆಗಾಗಿ ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಜಾತ್ರೆ, ಸಂತೆ, ಮಾಂಸದಂಗಡಿ, ಡಾಬಾ, ಹೋಟೆಲ್, ಎಗ್‌ರೈಸ್, ಪಾನಿಪೂರಿ, ಗೋಬಿಮಂಚೂರಿ ಸೆಂಟರ್‌ಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.

ಗುಂಪಾಗಿ ಸೇರುವುದು, ಮದುವೆ, ನಾಮಕರಣ ಇನ್ನಿತರ ಸಮಾರಂಭ ನಡೆಸುವುದನ್ನು ಸರ್ಕಾರದ ಮುಂದಿನ ಆದೇಶದ ವರೆಗೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಪಿಡಿ ಲೋಕೇಶ್ ತಿಳಿಸಿದ್ದಾರೆ.