ಸಿರಿಗೆರೆ: ಪರಿಸರದ ಕಾಳಜಿಯಿಂದ ರಾಜ್ಯ ಹೈಕೋರ್ಟ್ ರಾಜ್ಯಾದ್ಯಂತ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕುವುದನ್ನು ನಿಷೇಧಿಸಿ ಆದೇಶ ನೀಡಿದ್ದು, ಇದನ್ನು ಕಾರ್ಯರೂಪಕ್ಕೆ ತರುವುದು ಪ್ರಜ್ಞ್ಞಾವಂತರ ಕರ್ತವ್ಯ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಹಳೇಬೀಡಿನಲ್ಲಿ ಫೆ.1ರಿಂದ 9ರ ವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಕ್ತರು ಎಲ್ಲಿಯೂ ಫ್ಲೆಕ್ಸ್, ಬ್ಯಾನರ್ ಹಾಕದೆ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಬೇಕೆಂದು ಶ್ರೀಗಳು ಪ್ರಕಟಣೆ ಮನವಿ ಮಾಡಿದ್ದಾರೆ.