ಕುಕನೂರು: ಸಿರಿಧಾನ್ಯದಲ್ಲಿ ಆರೋಗ್ಯದ ಗುಟ್ಟು ಅಡಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಮಂಗಳೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಪೋಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಸಲಹೆಗಳನ್ನು ನೀಡಬೇಕು. ಸಮತೋಲನದ ಆಹಾರದ ಅವಶ್ಯಕತೆ ಅರಿವು ಹಾಗೂ ಅಪೌಷ್ಟಿಕತೆ ಕುರಿತು ಆಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ತಿಳುವಳಿಕೆ ಮೂಡಿಸಬೇಕು ಎಂದರು.
ಡಾ.ಸಿ.ಎಂ. ಹಿರೇಮಠ, ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ, ಸಿ.ಆರ್.ಪಿ ರವಿ ಡಿ.ಮಳಿಗಿ, ಸಿಡಿಪಿಓ ಸಿಂಧು ಅಂಗಡಿ, ನಿರೂಪಣಾಧಿಕಾರಿ ಗಂಗಪ್ಪ, ಗ್ರಾಪಂ ಅಧ್ಯಕ್ಷೆ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಗ್ರಾಪಂ ಉಪಾಧ್ಯಕ್ಷ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ, ಪಿಡಿಒ ನೀಲಂ ಚಳಗೇರಿ, ಮೇಲ್ವಿಚಾರಕಿ ಲಲಿತಾ ನಾಯಕ, ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಾ ವಿರೂಪಾಕ್ಷಪ್ಪ ಅರಳಿ, ಬಸಮ್ಮ, ಪಾರ್ವತಿ ಛಲವಾದಿ, ಸುಲೋಚನಾ ಭಂಗಿ, ಶರಣಮ್ಮ ಪೊಲೀಸ್ ಪಾಟೀಲ, ಜೈಲಕ್ಷ್ಮಿ ಇತರರಿದ್ದರು.