ಜಿಲ್ಲೆ

ಎಸ್​ಐಆರ್​ಸಿ ವಾರ್ಷಿಕ ಸಮ್ಮೇಳನ ನಾಳೆ

ಹುಬ್ಬಳ್ಳಿ : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ (ಎಸ್​ಐಆರ್​ಸಿ)37ನೇ ವಾರ್ಷಿಕ ಸಮ್ಮೇಳನವನ್ನು ಡಿ. 21ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ವಿದ್ಯಾನಗರದ ಕೆ.ಎಚ್. ಪಾಟೀಲ ಕಾಲೇಜು ಎದುರಿನ ಲೆಮನ್ ಟ್ರೀ ಹೋಟೆಲ್​ನಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮ್ಮೇಳನದ ಅಧ್ಯಕ್ಷ ಸಿಎ ಕೆ.ವಿ. ದೇಶಪಾಂಡೆ, ಈ ಬಾರಿಯ ವಾರ್ಷಿಕ ಸಮ್ಮೇಳನದ ಧ್ಯೇಯವಾಕ್ಯ ‘ಅರ್ಥಸಿದ್ಧಿ’ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಆರ್ಥಿಕ ಸಾಧನೆ ಎಂಬುದಾಗಿದೆ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಉದ್ಘಾಟಿಸುವರು ಎಂದರು.

ಈ ಒಂದು ದಿನದ ಸಮ್ಮೇಳನದಲ್ಲಿ ಅನೇಕ ಆರ್ಥಿಕ ತೆರಿಗೆ ಹಾಗೂ ತಂತ್ರಜ್ಞಾನದ ವಿಷಯಗಳ ಕುರಿತು ಮೂರು ಉಪನ್ಯಾಸ ಹಾಗೂ ಒಂದು ಚರ್ಚಾಕೂಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ತಂತ್ರಜ್ಞಾನ ಮತ್ತು ಎಐ, ಜಿಎಸ್​ಟಿ ಕಾಯ್ದೆ ಅಡಿಯಲ್ಲಿ ಅಸೆಸ್ಮೆಂಟ್ ಹಾಗೂ ಮೇಲ್ಮನವಿ ನಿರ್ವಹಣೆ, ಆದಾಯ ತೆರಿಗೆ ಎನ್​ಆರ್​ಐ ಟ್ಯಾಕ್ಸೇಕ್ಷನ್ ಕುರಿತು ಹೈದ್ರಾಬಾದ್​ನ ಸಿಎ ಶರಣ ಕುಮಾರ, ಬೆಂಗಳೂರಿನ ಸಿಎ ನರೇಂದ್ರಕುಮಾರ ಜೈನ್ ಹಾಗೂ ಬೆಂಗಳೂರಿನ ಸಿಎ ಜತಿನ್ ಕ್ರಿಸ್ಟೋಫರ್ ಅವರು ಉಪನ್ಯಾಸ ನೀಡುವರು ಎಂದು ತಿಳಿಸಿದರು. ಚರ್ಚಾಕೂಟದಲ್ಲಿ ಹಾವೇರಿಯ ಸಿಎ ಸಂತೋಷ ಮಾನ್ಗಾವಿ ಹಾಗೂ ನರೇಂದ್ರಕುಮಾರ ಜೈನ್, ಸಿಎ ಜತಿನ್ ಕ್ರಿಸ್ಟೋಫರ್ ಹಾಗೂ ಸಿಎ ಮಡಿವಾಳಪ್ಪ ತಿಗಡಿ ಭಾಗವಹಿಸುವರು ಎಂದು ವಿವರಿಸಿದರು.

ಈ ಸಮ್ಮೇಳನದಲ್ಲಿ ಸುಮಾರು 300 ಜನ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.