ಜಿಲ್ಲೆ

ಸಿರವಾರ ವಾರದ ಸಂತೆ ಸ್ಥಳಾಂತರಿಸಿ; ತಹಸೀಲ್ದಾರ್‌ಗೆ ಎಚ್‌ಕೆಎಸ್‌ಎಫ್ ಮನವಿ

ಸಿರವಾರ: ಪಟ್ಟಣದಲ್ಲಿ ಧೂಳು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ವಾರದ ಸಂತೆ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲು ಆಗ್ರಹಿಸಿ ತಹಸೀಲ್ದಾರ್ ವಿಜಯೇಂದ್ರ ಹುಲಿನಾಯಕಗೆ ಹೈದರಾಬಾದ್ ಕರ್ನಾಟಕ ಸ್ಟೂಡೆಂಟ್ ಫೆಡರೇಷನ್ (ಎಚ್‌ಕೆಎಸ್‌ಎಫ್) ಶುಕ್ರವಾರ ಮನವಿ ಸಲ್ಲಿಸಿತು.

ರಸ್ತೆ ಡಿವೈಡರ್‌ಗೆ ಹೊಂದಿಕೊಂಡಿರುವ ಕಸವನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಪಪಂ ಅಧಿಕಾರಿಗಳಿಗೆ ಸೂಚಿಸಬೇಕು. ಸೋಮವಾರದ ಸಂತೆ ಪ್ರಮುಖ ರಸ್ತೆಯ ಮೇಲೆ ನಡೆಯುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಬೇರೆಡೆ ಸ್ಥಳಾಂತರಿಸಬೇಕು. ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ತಾಲೂಕು ಕೇಂದ್ರದಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಇದ್ದೂ ಇಲ್ಲದಂತಾಗಿದೆ. ತಾಲೂಕು ಕೇಂದ್ರ ಘೋಷಣೆಯಾಗಿ ಐದಾರು ವರ್ಷಗಳೇ ಕಳೆದರೂ ಮೂಲ ಸೌಕರ್ಯಗಳ ಕೊರತೆ ಇದ್ದು, ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.