ಸಿರವಾರದ ಸಜ್ಜಲಗುಡ್ಡ ಶರಣಮ್ಮ ಆಶ್ರಮದಲ್ಲಿ ಶಿವಾನುಭವಗೋಷ್ಠಿಯನ್ನು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಕಂಬಳಿಹಾಳ-ಸಜ್ಜಲಗುಡ್ಡದ ದೊಡ್ಡಬಸವಾರ್ಯರು ಇತರರಿದ್ದರು. 
ಜಿಲ್ಲೆ

ಶೈಕ್ಷಣಿಕ ಕ್ರಾಂತಿ ಮಾಡಿದ್ದ ಸಜ್ಜಲಗುಡ್ಡ ಶರಣಮ್ಮ

ಸಿರವಾರ: ಬಸವಾದಿ ಶರಣರ ಆದರ್ಶಗಳಿಗೆ ಜೀವ ತುಂಬಿ ಕ್ರಾಂತಿ ನಡೆಸಿದ ಸಜ್ಜಲಗುಡ್ಡ ಶರಣಮ್ಮ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು

ಪಟ್ಟಣದ ಬಸವ ವೃತ್ತದಲ್ಲಿರುವ ಸಜ್ಜಲಶ್ರೀ ಶರಣಮ್ಮ ತಾಯಿ ಆಶ್ರಮದಲ್ಲಿ 54ನೇ ತ್ರೈಮಾಸಿಕ ಶಿವಾನುಭವಗೋಷ್ಠಿ ಉದ್ಘಾಟನೆ ಮಾಡಿ ಭಾನುವಾರ ಮಾತನಾಡಿದರು. ತಾಯಿ ಶರಣಮ್ಮ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ್ದಾರೆ. ಶರಣಮ್ಮ ಅವರಲ್ಲಿ ಜಾತಿ-ಮತ, ಮೇಲು-ಕೀಳು ಭಾವನೆ ಇರಲಿಲ್ಲ. ದೀನ-ದಲಿತರ ಜತೆ ಬದುಕು ಸಾಗಿಸಿ ಅವರ ಕಲ್ಯಾಣಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಕಂಬಳಿಹಾಳ-ಸಜ್ಜಲಗುಡ್ಡದ ದೊಡ್ಡಬಸವಾರ್ಯರು ಸಾನ್ನಿಧ್ಯ ವಹಿಸಿದ್ದರು. ಕವಿತಾಳ ಕಲ್ಮಠದ ಸಿದ್ಧಲಿಂಗ ಸ್ವಾಮೀಜಿ, ಸಿರವಾರ ಗದ್ದುಗೆಮಠದ ಚನ್ನವೀರ ದೇವರು, ಪ್ರಮುಖರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶೇಖರಪ್ಪ ಗಲಗ, ಎಂ.ರುದ್ರಗೌಡ, ಟಿ.ಆರ್ ಪಾಟೀಲ್, ಅಯ್ಯನಗೌಡ ಐರೆಡ್ಡಿ, ವೈ. ಭೂಪನಗೌಡ, ಬೂದೂರು ಗುರಪ್ಪ, ಸದಾಶಿವ ಪಾಟೀಲ್,ಮಲ್ಲಿಕಾರ್ಜುನ ಹೂಗಾರ, ಬಸವರಾಜ ಹೂಗಾರ, ಪರಮೇಶಪ್ಪ ಇತರರಿದ್ದರು.