ಜಿಲ್ಲೆ

ಕ್ರೂಸರ್-ಪಿಕಪ್ ವಾಹನ ನಡುವೆ ಡಿಕ್ಕಿಯಾಗಿ ಚಾಲಕ ಸಾವು

Raichur

ಸಿರವಾರ: ತಾಲೂಕಿನ ಜಾಲಾಪುರ ಹೊರವಲಯದಲ್ಲಿ ಮಂಗಳವಾರ ರಾತ್ರಿ ಕ್ರೂಸರ್- ಪಿಕಪ್ ವಾಹನ ಮಧ್ಯೆ ಡಿಕ್ಕಿಯಾಗಿ ಕ್ರೂಸರ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಕ್ರೂಸರ್ ಸಿರವಾರದಿಂದ ಮಾನ್ವಿಗೆ ಹೋಗುತ್ತಿರುವಾಗ ಎದುರುಗಡೆ ಬರುತ್ತಿದ್ದ ಪಿಕಪ್ ಎರಡು ಮುಖಾಮುಖಿ ಡಿಕ್ಕಿ ಹೊಡೆದು ಕ್ರೂಸರ್ ಮರಕ್ಕೆ ಅಪ್ಪಳಿಸಿರುವುದರಿಂದ ಕ್ರೂಸರ್‌ನಲ್ಲಿದ್ದ ಇಬ್ಬರಲ್ಲಿ ಚಾಲಕ ನಾಗರಾಜ (28) ಸ್ಥಳದಲ್ಲಿ ಸಾವಿಗೀಡಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಪಿಕಪ್ ವಾಹನದಲ್ಲಿದ್ದ ಚಾಲಕನಿಗೂ ಗಾಯಗಳಾಗಿದ್ದು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.