ಜಿಲ್ಲೆ

ಕಿಡಿಗೇಡಿಗಳಿಂದ ಅಂಬೇಡ್ಕರ್ ಕನ್ನಡಕ ವಿರೂಪ

ಪ್ರವೀಣ ಉದುಸಾ ದಲಬಂಜನ್

ಸಿರವಾರ: ತಾಲೂಕಿನ ಹರವಿ ಗ್ರಾಮದಲ್ಲಿ ಮಾನ್ವಿ-ಸಿರವಾರ ಮುಖ್ಯ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಕನ್ನಡಕವನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸಾರ್ವಜನಿಕರು ನೋಡಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ರವಿ ಎಸ್.ಅಂಗಡಿ ಹಾಗೂ ಸಿಪಿಐ ಎಂ. ಶಶಿಕಾಂತ ಅವರು ಭೇಟಿ ನೀಡಿ ಪರಿಶೀಲಿದ್ದಾರೆ. ಘಟನೆ ಖಂಡಿಸಿ ಗ್ರಾಮಸ್ಥರು ಹಾಗೂ ಪ್ರಗತಿಪರ ಹೋರಾಟಗಾರರು ಮಾನ್ವಿ ಸಿರವಾರ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದರು.ಸಿಪಿಐ ಶಶಿಕಾಂತ ಮಾತನಾಡಿ, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಅಂಬೇಡ್ಕರ್ ಮೂರ್ತಿಗೆ ಸುತ್ತ ರಕ್ಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಜನಶಕ್ತಿ ಕೇಂದ್ರದ ರಾಜ್ಯಾಧ್ಯಕ್ಷ ಪ್ರಭುರಾಜ ಕೊಡ್ಲಿ, ಮುಖಂಡರಾದ ಕೆ.ನಾಗಲಿಂಗಸ್ವಾಮಿ, ಶಿವರಾಜ ಜಾನೇಕಲ್, ಯಲ್ಲಪ್ಪ ಹೀರೆ ಬದರಾದಿನ್ನಿ, ತಿಪ್ಪಣ ಬಾಗವಾಡ, ರವಿಕುಮಾರ ಮಾನ್ವಿ, ತಿಮ್ಮಪ್ಪ ಹಳ್ಳಿ ಹೊಸೂರು, ಶಿವರಾಜ ಉಮಳಿಹೊಸೂರು, ಹನುಮಂತ ಸೀಕಲ್, ಹನುಮಂತ ಉದ್ಬಾಳ , ಹನುಮಂತ್ರಾಯ ಕಪಗಲ್, ಶಂಕರಗೌಡ ಹರವಿ, ಶರಣಬಸವ ನಾಯಕ ಜಾನೇಕಲ್, ಬಸ್ಸಪ್ಪ ಹರವಿ, ಕಾಶಿನಾಥ ಕುರ್ಡಿ, ಪೋಮ್ಮಣ್ಣ, ಹಂಪಯ್ಯ, ಗೊಪಾಲನಾಯಕ ಹರವಿ, ಎಚ್. ಶಿವಪ್ಪ ಹರವಿ ಸೇರಿದಂತೆ ಇನ್ನಿತರಿದ್ದರು.