ಅತ್ತನೂರು ಮಠದಲ್ಲಿ ಪ್ರವಚನ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಅಭಿನವ ರಾಚೋಟಿವೀರ ಶಿವಾಚಾರ್ಯರು ಮಾಲಾರ್ಪಾಣೆ ಮಾಡುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ವಿರುಪಾಕ್ಷಯ್ಯ ಸ್ವಾಮಿ ಗುರುಮಠ, ಶರಣು ಪಾಟೀಲ್ ತಿಪ್ಪಲದಿನ್ನಿ, ಅಯ್ಯಪ್ಪ ಗೌಡ ಗಣೇಕಲ್, ಭೀಮಪ್ಪ ನಾಯಕ ದದ್ದಲ್, ಕೆ.ಬಸವಂತ ವಕೀಲರು,ಯಲ್ಲಪ್ಪ ಜಗಲಿ ಇದ್ದರು. 
ಜಿಲ್ಲೆ

ಹಿರಿಯರು ಮಕ್ಕಳಿಗೆ ಸಂಸ್ಕಾರ ನೀಡಲಿ

ಸಿರವಾರ: ಪ್ರವಚನಗಳನ್ನು ಕೇಳಿದರೆ ಮನಸ್ಸು ಶುದ್ಧವಾಗುತ್ತದೆ ಮತ್ತು ನೆಮ್ಮದಿ ಸಿಗುತ್ತದೆ ಎಂದು ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅತ್ತನೂರು ಮಠದಲ್ಲಿ ಸೋಮವಾರ ಪೇಟೆ ಹಿರೇಮಠ ಮತ್ತು ರಾಯಚೂರು ರಾಚೋಟಿವೀರ ಶಿವಾಚಾರ್ಯರ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ನವಲಗುಂದದ ಅಜಾತ ನಾಗಲಿಂಗ ಶಿವಯೋಗಿಗಳ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರು ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಬುಧವಾರದಿಂದ ಪ್ರಾರಂಭವಾದ ಪ್ರವಚನ ಏ.13 ಮಂಗಲವಾಗಲಿದೆ. ಅಂದು ಅತ್ತನೂರು ಮಠದಲ್ಲಿ ವಿಶೇಷ ಅಭಿಷೇಕ, ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವೀರಭದ್ರ ಶಿವಾಚಾರ್ಯರು, ರಾಚೋಟಿವೀರ ಶಿವಾಚಾರ್ಯರು, ಡಾ.ಪಂಚಾಕ್ಷರಿ ಶಿವಾಚಾರ್ಯರು ಸಂದೇಶ ನೀಡಲಿದ್ದಾರೆ. ಶಾಂತಮಲ್ಲ ಶಿವಾಚಾರ್ಯರು, ಬೂದಿಬಸವ ಶಿವಾಚಾರ್ಯರು, ಅಭಿನವ ಸೋಮನಾಥ ಶಿವಾಚಾರ್ಯರು, ಡಾ.ವಿರೂಪಾಕ್ಷ ಪಂಡಿತರಾಧ್ಯರು, ರೇಣುಕ ಶಾಂತಮಲ್ಲ ಶಿವಾಚಾರ್ಯರು, ಶಂಭು ಸೋಮನಾಥ ಶಿವಾಚಾರ್ಯರು, ರಾಚಯ್ಯಪ್ಪ ತಾತ, ವಿರುಪಾಕ್ಷಯ್ಯಪ್ಪ ತಾತ, ಬೆಟ್ಟಪ್ಪ ತಾತ, ಸಾಂಬಯ್ಯಪ್ಪ ತಾತ ಭಾಗವಹಿಸಲಿದ್ದಾರೆ.