ಸಿರಗುಪ್ಪದ ಜಲಶುದ್ಧೀಕರಣ ಘಟಕದಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಸೆರೆ ಹಿಡಿದರು. 
ಜಿಲ್ಲೆ

ಸಿರಗುಪ್ಪ ಜಲಶುದ್ಧೀಕರಣ ಘಟಕದಲ್ಲಿ ಮೊಸಳೆ ಪ್ರತ್ಯಕ್ಷ, ಅರಣ್ಯ ಸಿಬ್ಬಂದಿ, ಸ್ಥಳೀಯರಿಂದ ಸೆರೆ

ಸಿರಗುಪ್ಪ: ನಗರದ ಜಲಶುದ್ಧೀಕರಣ ಘಟಕದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂ ಹಿಡಿದಿದ್ದಾರೆ. ಜಲಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಬುಧವಾರ ಮೊಸಳೆಯನ್ನು ಕಂಡು ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ, ಹಳೆಕೋಟೆಯ ವೇಷಗಾರ ಮಲ್ಲಯ್ಯ ಸೇರಿ ಇತರರ ಸಹಾಯದೊಂದಿಗೆ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ತುಂಗಭದ್ರಾ ನದಿಯಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಗಿರೀಶ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಗಭದ್ರಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಚರಂಡಿ ನೀರಿನ ಮೂಲಕ ನಗರದ ಕಡೆ ಬಂದಿರಬಹುದು ಎಂಬುದು ಸಾರ್ವಜನಿಕರ ಆರೋಪವಾಗಿದೆ. ಜನನಿಬಿಡ ಪ್ರದೇಶಗಳಲ್ಲೂ ದಿಢೀರನೆ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದು, ಆತಂಕ ಮೂಡಿಸಿದೆ.