ಜಿಲ್ಲೆ

ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಲಿ

Gangavati - Desk - Veeresh S Ullagaddi

ಸಿರಗುಪ್ಪ: ಅಂಗವಿಕಲರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತ್ರಿಚಕ್ರ ವಾಹನ ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊ ಳ್ಳಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ನಗರದ ತಾಪಂ ಆವರಣದಲ್ಲಿ ಶಾಸಕರ ಅನುದಾನ 2021-22 ಮತ್ತು 2022-23 ಅಡಿ 20 ಫಲಾನುಭವಿಗಳಿಗೆ ಭಾನುವಾರ ತ್ರಿಚಕ್ರವಾಹನಗಳನ್ನು ವಿತರಿಸಿ ಮಾತನಾಡಿದರು.

ಕೆಲವರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅಂಗಡಿಗೆ ಸಂಬಂಧಿಸಿದ ವಸ್ತಗಳನ್ನು ತರಲು ಇತರರನ್ನು ಅವಲಂಬಿಸಬೇಕಾಗಿರುತ್ತದೆ. ಆದರೆ, ಈ ತ್ರಿಚಕ್ರ ವಾಹನ ವಿತರಿಸುವುದರಿಂದ ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳಲು ಸಹಕಾರಿಯಾಗಿಲಿದೆ. ಇತರರಿಗೆ ಮಾದರಿಯಾಗುವ ಹಾಗೆ ಜೀವನ ಸಾಗಿಸಬೇಕು.ಅಲ್ಲದೆ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು ಎಂದರು.