ಬಲಕುಂದಿ ಗ್ರಾಮದ ಶ್ರೀ ಬನ್ನಿಮಹಂಕಾಳಿ ದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ ಕುಂಟ್ನಾಳ್ ಮಲ್ಲಿಕಾರ್ಜುನ, ಕೋರಿಪಿಡ್ಡಯ್ಯ ಇತರರಿದ್ದರು. 
ಜಿಲ್ಲೆ

ದೇವಸ್ಥಾನಗಳ ಸ್ವಚ್ಛತೆ ನಮ್ಮ ಕರ್ತವ್ಯ

ಸಿರಗುಪ್ಪ: ದೇವಸ್ಥಾನಗಳು ಶಾಂತಿ ಮತ್ತು ನೆಮ್ಮದಿ ನೀಡುವ ತಾಣಗಳಾಗಿದ್ದು, ಸ್ವಚ್ಛವಿಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಬಲಕುಂದಿ ಗ್ರಾಮದ ಶ್ರೀ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕು ಬಿಜೆಪಿ ಘಟಕ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಚ್ಛ ತೀರ್ಥಕ್ಷೇತ್ರ ಅಭಿಯಾನ ನಿಮಿತ್ತ ಬಿಜೆಪಿ ತಾಲೂಕು ಘಟಕದಿಂದ ದೇವಸ್ಥಾನ ಆವರಣಗಳ ಶುದ್ಧ ಕಾರ್ಯ ಹಾಗೂ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಸುತ್ತಲಿನ ಪರಿಸರ ಉತ್ತಮವಾಗಿದ್ದರೆ ನಾವೆಲ್ಲ ಆರೋಗ್ಯವಾಗಿರಲು ಸಾಧ್ಯ ಎಂದರು. ಮುಖಂಡರಾದ ಕುಂಟ್ನಾಳ್ ಮಲ್ಲಿಕಾರ್ಜುನ, ಕೋರಿಪಿಡ್ಡಯ್ಯ, ಶೇಖಪ್ಪ, ಎಂ.ಎಸ್.ಕೊಮಾರೆಪ್ಪ, ಕಾಳಿಂಗ, ಎಚ್.ಈರಣ್ಣ, ಮುತ್ತಯ್ಯ, ಶರಣಬಸವ, ಮಂಜುನಾಥ, ಮುದಿಯಪ್ಪ, ಬಲಕುಂದೆಪ್ಪ, ಪ್ರಕಾಶಗೌಡ, ಮಲ್ಲಯ್ಯ, ವೀರನಗೌಡ ಇದ್ದರು.