ಸಿರಗುಪ್ಪದಲ್ಲಿ ಸೇವಾದಳದಿಂದ ಆಯೋಜಿಸಿದ್ದ ವಿದ್ಯಾರ್ಥಿ ನಾಯಕತ್ವ ಶಿಬಿರವನ್ನು ಸೇವಾದಳದ ತಾಲೂಕು ಅಧ್ಯಕ್ಷ ಪಿ.ಯೋಗರಾಜ್ ಉದ್ಘಾಟಿಸಿದರು. ಜಿಲ್ಲಾ ಸಂಚಾಲಕ ಗಣೇಶ ಬಾರಿಕೇರ, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ರಮೇಶ್, ಇಸಿಒ ವೆಂಕಟೇಶ್ ಇತರರಿದ್ದರು. 
ಜಿಲ್ಲೆ

ಸೇವಾದಳದಿಂದ ಸಮಾಜಮುಖಿ ಕೆಲಸ

ಶಾಮಸುಂದರ್ ಕೊಪ್ಪಳಕರ್

ಸಿರಗುಪ್ಪ: ಭಾರತ ಸೇವಾ ದಳದಲ್ಲಿ ತೊಡಗಿಸಿಕೊಳ್ಳುವುದರಿಂದ ಸೇವಾ ಭಾವನೆ ಬೆಳೆಯುತ್ತದೆ ಎಂದು ಸೇವಾ ದಳದ ತಾಲೂಕು ಘಟಕದ ಅಧ್ಯಕ್ಷ ಪಿ.ಯೋಗರಾಜ್ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೇವಾದಳ ಶತಮಾನೋತ್ಸವ ಸ್ಮರಣಾರ್ಥ ಆಯೋಜಿಸಿದ್ದ ವಿದ್ಯಾರ್ಥಿ ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸೇವಾದಳ ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಮಕ್ಕಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣ ಬೆಳೆಸುತ್ತದೆ. ದೇಶ ಹಾಗೂ ಭಾಷೆಯ ಅಭಿಮಾನ ಹೆಚ್ಚಿಸುತ್ತದೆ ಎಂದು ಹೇಳಿದರು. ಶಿಕ್ಷಕರಾದ ಚನ್ನಪ್ಪ, ವೆಂಕಟೇಶ್ ಎರೆಪ್ಪ ಗೌಡ, ಮಲ್ಲಿಕಾರ್ಜುನಗೌಡ, ದಾನಪ್ಪ, ಅಜ್ಮೀರ್ , ಮಲ್ಲಿಕಾರ್ಜುನಗೌಡ ಇತರರಿದ್ದರು.