ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪಗೆ ಎಸ್‌ಸಿ ಎಸ್‌ಟಿ ಮೀಸಲಾತಿ ಹೊರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ಎಚ್.ಎನ್ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿ ಯಥಾವತ್ತಾಗಿ ಜಾರಿಯಾಗಲಿ

ಸಿರಗುಪ್ಪ: ಮೀಸಲಾತಿ ಹೆಚ್ಚಳದ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಶಾಸಕ ಎಂ.ಎಸ್.ಸೋಮಲಿಂಗಪ್ಪಗೆ ಎಸ್‌ಸಿ, ಎಸ್‌ಟಿ ಮೀಸಲಾತಿ ಹೊರಾಟ ಸಮಿತಿ ಮನವಿ ಸಲ್ಲಿಸಿತು. ಸಹ ಸಂಚಾಲಕ ವಾ.ಹುಲಗಯ್ಯ ಮಾತನಾಡಿ, 2011ರ ಜನಗಣತಿಯಲ್ಲಿ ರಾಜ್ಯದ ಪ.ಜಾತಿಗೆ ಶೇ 15-17.5, ಪಂಗಡಕ್ಕೆ ಶೇ 3-7.5 ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಒತ್ತಾಯಿ ವಿಧಾನಸಭೆ ಕಲಾಪಗಳಲ್ಲಿಯೂ ಚರ್ಚೆ ಮಾಡಬೇಕೆಂದು ಮನವಿ ಮಾಡಿದರು. ಸಮಿತಿ ಸದಸ್ಯರಾದ ಪಂಪಯ್ಯ, ತಿಮ್ಮಯ್ಯ, ಗಂಗಪ್ಪ, ಬಿ.ಬಸವರಾಜ, ಎಂ.ವೀರೇಶಪ್ಪ, ಈರಣ್ಣ, ಬಿ.ಕೆ.ರಘು, ಮುದುಕಪ್ಪ, ಎಂ. ಹೊನ್ನಪ್ಪ, ವೀರೇಶ, ಕೆ.ಮಲ್ಲಿಕಾರ್ಜುನ, ಕ್ರಿಷ್ಣ, ವಿ.ನಾಗರಾಜ ಇದ್ದರು.