ಸಿರಗುಪ್ಪ: ಬರಪೀಡಿತ ತಾಲೂಕುಗಳಲ್ಲಿ ಸಮರ್ಪಕ ಮೇವು, ನೀರಿನ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿಯಿಂದ ಬುಧವಾರ ತಾಪಂ ಅಧಿಕಾರಿ ನಾಗರತ್ನಮ್ಮಗೆ ಮನವಿ ಸಲ್ಲಿಸಲಾಯಿತು.
ಕೃಷಿ ಕೂಲಿಕಾರರ ಸಂಘದ ಪ್ರ.ಕಾರ್ಯದರ್ಶಿ ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ 195 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿದೆ. ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಹಾ ನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಆದ್ದರಿಂದ ಬರ ಪೀಡಿತ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ 200 ದಿನ ಕೆಲಸ ನೀಡಬೇಕು. ದಿನಗೂಲಿ 600 ರೂ.ಗೆ ಹೆಚ್ಚಿಸಬೇಕು.
ಇದನ್ನೂ ಓದಿ: ಶಿವಗಂಗಾ ಗ್ರಾಪಂನಲ್ಲಿ ನರೇಗಾ ಕಡತ ಪರಿಶೀಲನೆ
ಕೂಲಿಕಾರರು ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಜನರಿಗೆ ಶುದ್ಧ ಕುಡಿವ ನೀರೊದಗಿಸಬೇಕು. ದನಕರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಂತ್ರಗಳ ಬಳಕೆ ನಿಲ್ಲಿಸಿ ಕೂಲಿಕಾರರಿಗೆ ಕೆಲಸದ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಬಿ.ಸುರೇಶ್, ಈರಮ್ಮ, ಹುಲಿಗೆಮ್ಮ, ಪಕ್ಕೀರಮ್ಮ, ಅನ್ನಪೂರ್ಣ, ಕಮಲಮ್ಮ, ಲಿಂಗಮ್ಮ, ರೇಣುಕಮ್ಮ, ಜಯಮ್ಮ, ಈರಣ್ಣ, ಓಬಳೇಶಪ್ಪ, ಇ.ಆರ್.ಯಲ್ಲಪ್ಪ, ಮಾರುತಿ ಇತರರಿದ್ದರು.