ಸಿರುಗುಪ್ಪದಲ್ಲಿ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟನೆ ವೇಳೆ ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ ಪ್ರಮುಖರಾದ ಎನ್.ಅಬ್ದುಲ್ ಸಾಬ್, ಜಗದೀಶಸ್ವಾಮಿ, ರುದ್ರಮುನಿ, ಹುಲುಗಪ್ಪ, ಎಚ್.ಮಹೇಶ ಇತರರಿದ್ದರು. 
ಜಿಲ್ಲೆ

ಮೊಬೈಲ್ ಗೀಳಿನಿಂದ ಒತ್ತಡ ಹೆಚ್ಚಳ

ಸಿರಗುಪ್ಪ: ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದು, ವಿದ್ಯಾಭ್ಯಾಸದತ್ತ ಗಮನಹರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಹೇಳಿದರು.

ನಗರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಿಂದ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲ ಎನ್.ಅಬ್ದುಲ್ ಸಾಬ್ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ನಿತ್ಯ ಯೋಗ, ವ್ಯಾಯಾಮ, ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗಲಿದೆ ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಕಾಸಿಂ ಮಾತನಾಡಿದರು. ಪ್ರಾಚಾರ್ಯ ಬಸವನಗೌಡ, ಪ್ರಮುಖರಾದ ಜಗದೀಶಸ್ವಾಮಿ, ರುದ್ರಮುನಿ, ಹುಲುಗಪ್ಪ, ಎಚ್.ಮಹೇಶ ಇತರರಿದ್ದರು.