ಸಿರಗುಪ್ಪ ತಾಲೂಕಿನ ಬಾಗೇವಾಡಿ ಕ್ಯಾಂಪ್‌ನಲ್ಲಿರುವ ಶ್ರೀ ಷಡಕ್ಷರಿ ಶಿವಯೋಗ ಸಿದ್ದರಾಮೇಶ್ವರರ 12ನೇ ವರ್ಷದ ಜಾತ್ರ ಮಹೋತ್ಸವ ಅಂಗವಾಗಿ ನಡೆದ ಹಾನಗಲ್ ಕುಮಾರೇಶ್ವರ ಶ್ರೀಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಅಭಿನವ ಭೋಜ ಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. 
ಜಿಲ್ಲೆ

12ಕ್ಕೆ ಶ್ರೀ ಕುಮಾರೇಶ್ವರ ಪುರಾಣ ಪ್ರವಚನ

ಸಿರಗುಪ್ಪ: ಶ್ರೀ ಷಡಕ್ಷರಿ ಶಿವಯೋಗ ಸಿದ್ದರಾಮೇಶ್ವರ ಪುಣ್ಯಾಶ್ರಮದಲ್ಲಿ ಮಾ.12ರ ಬೆಳಗ್ಗೆ 9ಕ್ಕೆ ಶ್ರೀ ಅಂಬಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, 11ಕ್ಕೆ ದೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಷಡಕ್ಷರಿ ಶಿವಯೋಗಿ ಅಭಿನವ ಭೋಜ ಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಾಗೇವಾಡಿ ಕ್ಯಾಂಪ್‌ನಲ್ಲಿರುವ ಶ್ರೀ ಷಡಕ್ಷರಿ ಶಿವಯೋಗ ಸಿದ್ದರಾಮೇಶ್ವರರ 12ನೇ ವರ್ಷದ ಜಾತ್ರ ಮಹೋತ್ಸವ ಅಂಗವಾಗಿ ಬುಧವಾರ ಹಾನಗಲ್ ಕುಮಾರೇಶ್ವರ ಶ್ರೀಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಕುಂಭ ಕಳಸ ಡೊಳ್ಳು, ಭಾಜಾ, ಭಜಂತ್ರಿಯೊಂದಿಗೆ ಶ್ರೀ ಶರಣ ಬಸವೇಶ್ವರ ಹಾಗೂ ಶ್ರಿ ಸಿದ್ದರಾಮೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಗಂಟೆಗೆ ಧರ್ಮ ಜಾಗೃತಿ ಸಭೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಮುಖಂಡರಾದ ದೇವೇಂದ್ರಪ್ಪ, ವೆಂಕಟೇಶ, ಮಾಧವಯ್ಯ ಶೆಟ್ಟಿ, ಮಧುಬಾಬು, ಸೋಮೇಶ, ಈರಣ್ಣ, ಬಾಗೇವಾಡಿ ವೆಂಕಟೇಶ, ಪೆಟ್ಟಿ ಮಲ್ಲಯ್ಯ, ಅಂಬರೇಶಗೌಡ, ದೇವಣ್ಣ ಮತ್ತು ಬಾಗೇವಾಡಿ ಗ್ರಾಮಸ್ಥರು ಇದ್ದರು.