ಸಿರಗುಪ್ಪ ತಾಲೂಕಿನ ತೆಕ್ಕಲಕೊಟೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ ದಾಳಿ ಮಾಡಿದ ಪೊಲೀಸರು ಪಟಾಕಿಗಳನ್ನು ವಶಕ್ಕೆ ಪಡೆದಿರುವುದು. ಸಿಪಿಐ ಸುಂದರೇಶ್, ಪೇದೆ ಶಂಕ್ರಪ್ಪ ಇತರರಿದ್ದರು. 
ಜಿಲ್ಲೆ

ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿ ಜಪ್ತಿ

ನರೇಶ್ ಕುಮಾರ್

ಸಿರಗುಪ್ಪ: ತೆಕ್ಕಲಕೋಟೆಯ 13ನೇ ವಾರ್ಡ್‌ನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿ ದಾಸ್ತಾನನ್ನು ಸ್ಥಳೀಯ ಪೊಲೀಸರು ಗುರುವಾರ ದಾಳಿ ನಡೆಸಿ ವಶಕ್ಕೆ ಪಡೆದರು.

ಸಿಪಿಐ ಸುಂದರೇಶ್ ನೇತೃತ್ವದ ತಂಡ ಪಟ್ಟಣದ ನಿವಾಸಿ ಪಿ.ಶಿವಕುಮಾರ್ ಬಾಡಿಗೆ ಪಡೆದಿದ್ದ ಗೋದಾಮಿನಲ್ಲಿ 21 ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1,62,250 ರೂ. ಮೌಲ್ಯದ ಪಟಾಕಿಗಳನ್ನು ಜಪ್ತಿ ಮಾಡಲಾಯಿತು.

ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.