ಕರೂರು ಗ್ರಾಮದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಡಾ.ಸುನೀಲ್, ಗ್ರಾಪಂ ಅಧ್ಯಕ್ಷೆ ವಿ.ಶಾರದಮ್ಮ ಶ್ರೀನಿವಾಸ, ಪಿಡಿಒ ಶಿವಪ್ಪ, ಆರೋಗ್ಯ ಇಲಾಖೆ ನೌಕರ ಯಂಕಪ್ಪ ಇತರರಿದ್ದರು. 
ಜಿಲ್ಲೆ

ಆರೋಗ್ಯವಂತರು ರಕ್ತದಾನ ಮಾಡಲಿ

ನರೇಶ್ ಕುಮಾರ್

ಸಿರಗುಪ್ಪ: ರಕ್ತದಾನದಿಂದ ಹೃದಯಾಘಾತವನ್ನು ತಡೆಯಬಹುದು ಎಂದು ಡಾ.ಸುನೀಲ್ ಹೇಳಿದರು.

ಕರೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ, ಆಯುಷ್ಮಾನ್ ಅಭಿಯಾನ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ.

ಕೇವಲ ಮನುಷ್ಯರ ದೇಹದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಅಪಘಾತಗಳು ನಡೆದ ಸಂದರ್ಭದಲ್ಲಿ ಗಾಯಾಳುಗಳು, ಗರ್ಭಿಣಿಯರು, ಬಾಣಂತಿಯರಿಗೆ, ವಿವಿಧ ರೋಗಗಳಿಂದ ಬಳಲುವವರಿಗೆ ರಕ್ತದ ಅನಿವಾರ್ಯತೆ ಇರುತ್ತದೆ.

ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ ಮೂರು ಬಾರಿ ರಕ್ತ ದಾನ ಮಾಡಬಹುದು. ಇದರಿಂದ ಅನೇಕ ರೋಗಗಳು ಬರದಂತೆ ತಡೆಯಬಹುದಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ವಿ.ಶಾರದಮ್ಮ ಶ್ರೀನಿವಾಸ, ಪಿಡಿಒ ಶಿವಪ್ಪ, ಆರೋಗ್ಯ ಇಲಾಖೆ ನೌಕರ ಯಂಕಪ್ಪ ಇತರರಿದ್ದರು.