ಸಿರಗುಪ್ಪ ನಗರದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ನಡೆಯಲಿರುವ ರಕ್ತದಾನ ಶಿಬಿರದ ಬಗ್ಗೆ ಡಿವೈಎಸ್ಪಿ ವೆಂಕಟೇಶ, ಟಿಎಚ್‌ಒ ಡಾ.ಈರಣ್ಣ, ಪಿಎಸ್‌ಐ ತಿಮ್ಮಣ್ಣ ನಾಯಕ, ಆರೋಗ್ಯ ಸಹಾಯಕ ಪ್ರವೀಣ್‌ಕುಮಾರ್ ಇದ್ದರು. 
ಜಿಲ್ಲೆ

ಆ.11ರಂದು ಸಿರಗುಪ್ಪದಲ್ಲಿ ರಕ್ತದಾನ ಶಿಬಿರ

ಸಿರಗುಪ್ಪ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆರೋಗ್ಯ ಇಲಾಖೆ ಸಹಾಯೋಗದಲ್ಲಿ ಆ.11ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ವೆಂಕಟೇಶ ತಿಳಿಸಿದರು.

ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಶಿಬಿರ ನಡೆಯಲಿದ್ದು, ಶಾಸಕ ಬಿ.ಎಂ.ನಾಗರಾಜ ಮತ್ತು ಎಸ್ಪಿ ರಂಜಿತ್‌ಕುಮಾರ್ ಬಂಡಾರು ಉದ್ಘಾಟಿಸಲಿದ್ದಾರೆ. ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದ್ದು, ಇಲಾಖೆ ಸಿಬ್ಬಂದಿ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಲಿದ್ದಾರೆ. ಆರೋಗ್ಯವಾಗಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಿದರೆ ಅನೇಕ ರೋಗಿಗಳ ಜೀವ ಉಳಿಸಲು ಸಾಧ್ಯ ಎಂದರು.

ಟಿಎಚ್‌ಒ ಡಾ.ಈರಣ್ಣ, ಪಿಎಸ್‌ಐ ತಿಮ್ಮಣ್ಣ ನಾಯಕ, ಆರೋಗ್ಯ ಸಹಾಯಕ ಪ್ರವೀಣ್‌ಕುಮಾರ್ ಇದ್ದರು.