ಸಿರಗುಪ್ಪದಲ್ಲಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಜಾಗೃತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟಿಸಿದರು. ಪ್ರಮುಖರಾದ ಕೆ.ಮಲ್ಲಿಕಾರ್ಜುನಸ್ವಾಮಿ, ಎಂ.ಎಸ್.ಸಿದ್ದಪ್ಪ, ದೊಡ್ಡ ಹುಲುಗಪ್ಪ, ಟಿ.ಧರಪ್ಪನಾಯಕ ಇತರರಿದ್ದರು. 
ಜಿಲ್ಲೆ

ಸದಸ್ಯತ್ವ ನೋಂದಣಿ ಮಾಡಿಸಲು ಶ್ರಮಿಸಿ

ಶಾಮಸುಂದರ್ ಕೊಪ್ಪಳಕರ್

ಸಿರಗುಪ್ಪ: ದೇಶದಲ್ಲಿ ಸೆ.2ರಂದು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಗಲಿದ್ದು, ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ಬಲವರ್ಧನೆಗೆ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಬೇಕೆಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

ನಗರದ ಭವಾನಿ ಫಂಕ್ಷನ್ ಹಾಲ್‌ನಲ್ಲಿ ಬಿಜೆಪಿ ಮಂಡಲ ಗುರುವಾರ ಏರ್ಪಡಿಸಿದ್ದ ಸದಸ್ಯತ್ವ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಬಾರಿ 40 ಸಾವಿರ ಸದಸ್ಯತ್ವ ಮಾಡಿಸಲಾಗಿತ್ತು. ಈಗ 60 ಸಾವಿರ ಗುರಿ ನೀಡಿದ್ದು, ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಶ್ರಮಿಸಬೇಕು ಎಂದರು.

ಮಂಡಲ ಅಧ್ಯಕ್ಷ ಕೆ.ಮಲ್ಲಿಕಾರ್ಜುನಸ್ವಾಮಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಹುಲುಗಪ್ಪ, ಪ್ರಕೋಷ್ಠ ಜಿಲ್ಲಾ ಅಧ್ಯಕ್ಷ ಪ್ರಕಾಶಗೌಡ, ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಶಿವಪ್ಪ, ಪ್ರಮುಖರಾದ ಟಿ.ಧರಪ್ಪನಾಯಕ, ಕೋರಿಪಿಡ್ಡಯ್ಯ, ಉಡೇದ ಸುರೇಶ ಇದ್ದರು.