ಸಿರಗುಪ್ಪ: ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಕುರುಬರ ಆರಾಧ್ಯ ದೈವ ತರಸಾಲಪ್ಪ-ಈರನಾಗಪ್ಪ ಉಭಯ ದೇವರ ಉತ್ಸವ ಬುಧವಾರ ಭಕ್ತಿಯೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.
ಇದನ್ನೂ ಓದಿ: ಕಿತ್ತೂರು ಉತ್ಸವ ಸಮಾರೋಪಕ್ಕೆ ಸಿಎಂ
ಬ್ರಾಹ್ಮಿ ಮುಹೂರ್ತದಲ್ಲಿ ದೇವಸ್ಥಾನದಿಂದ ತರಸಾಲಪ್ಪ-ಈರನಾಗಪ್ಪ ದೇವರುಗಳನ್ನು ಪಲ್ಲಕ್ಕಿ ಉತ್ಸವದ ಮೂಲಕ ತುಂಗಭದ್ರಾ ನದಿಗೆ ತೆರಳಿ, ಗಂಗಾ ಪೂಜೆ ನೆರೆವೇರಿಸಲಾಯಿತು. ಕಂಬಳಿ ಗದ್ದುಗೆ ಹಾಕಿ ದೇವರನ್ನು ಸ್ಥಾಪಿಸಿ ಛತ್ರ, ಚಾಮರಗಳಿಂದ ಅಲಂಕರಿಸಿ ಪೂಜಿಸಲಾಯಿತು. ನಂತರ ಗ್ರಾಮದ ಕುರುಬ ಜನಾಂಗದವರು ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಬೆಳಗಿನಿಂದ ಉಪವಾಸ ಇದ್ದು, ಸಂಜೆ ಹೂವಿನ ಕಂಕಣ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿ ನಂತರ ವ್ರತ ಅಂತ್ಯಗೊಳಿಸಿದರು. ಸಂಜೆ ನದಿಯಿಂದ ದೇವರುಗಳನ್ನು ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಬೀರಲಿಂಗಪ್ಪನ ಕೊಳಲು ವಾದ ಹಾಗೂ ಡೊಳ್ಳಿನ ನಾದ ಗಮನ ಸೆಳೆಯಿತು.
ಪ್ರಮುಖರಾದ ನಾಗಮ್ಮ ಉಪ್ಪಳಪ್ಪ, ಹಲಗದ ಶಿವಣ್ಣ, ದೊಡ್ಡಮನಿ ಪದ್ಮಶ್ರೀ ನಾಗರಾಜ, ಮುಖಂಡರಾದ ಬೀರಲಿಂಗಪ್ಪ, ಉಲ್ತಿ ಮಹಾದೇವ, ಹೊಸಮನಿ ಯಲ್ಲಪ್ಪ, ಹಲಗದ ಈರನಾಗಪ್ಪ, ಮಾಡಿಗೆರಿ ಫಕ್ಕೀರಪ್ಪ, ಹಲಗದ ಬೀರಪ್ಪ, ಹಲಗದ ನಾಗರಾಜ, ಹೊಸಮನಿ ನಾಗಯ್ಯ, ಕತ್ತೇರ ತಾಯಣ್ಣ, ಆದಿಮನಿ ಪಂಪಣ್ಣ, ಹಲಗದ ವೀರೇಶ, ಪೂಜಾರಿ ನಾಗಪ್ಪ ಇತರರಿದ್ದರು.