ಡಿವೈಎಸ್ಪಿ ವೆಂಕಟೇಶ್ ಉಂಗಿಬಂಡಿ 
ಜಿಲ್ಲೆ

ಗ್ರಾಹಕರಿಗೆ ಬ್ಯಾಂಕ್‌ಗಳು ಜಾಗೃತಿ ಮೂಡಿಸಲಿ

ಸಿರಗುಪ್ಪ: ಬ್ಯಾಂಕ್‌ನಿಂದ ಹಣ ಪಡೆದ ನಂತರ ಗ್ರಾಹಕರು ಎಲ್ಲೆಂದರಲ್ಲಿ ತಿರುಗಾಡದೆ ಸುರಕ್ಷಿತವಾಗಿ ಮನೆಗೆ ತೆಗೆದುಕೊಂಡು ಹೋಗಬೇಕು. ಈ ಕುರಿತು ಸಾರ್ವಜನಿಕರಿಗೆ ಬ್ಯಾಂಕ್‌ನಿಂದ ಅರಿವು ಮೂಡಿಸಬೇಕು ಎಂದು ಡಿವೈಎಸ್ಪಿ ವೆಂಕಟೇಶ್ ಉಂಗಿಬಂಡಿ ಹೇಳಿದರು. ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕುರಿತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಹಣ ವಿತ್‌ಡ್ರಾ ಮಾಡುವಾಗ ಅನಾಮಧೇಯ ವ್ಯಕ್ತಿಗಳು ಗ್ರಾಹಕರ ಚಲನವಲನ ಗಮನಿಸುತ್ತಿರುತ್ತಾರೆ. ಅವರ ಮೇಲೆ ನಿಗಾ ವಹಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಬ್ಯಾಂಕ್-ಎಟಿಎಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ ಎಂದರು. ಸಭೆಯಲ್ಲಿ ಸಿಪಿಐ ಹನುಮಂತಪ್ಪ, ಪಿಎಸ್‌ಐ ಬಸವರಾಜ, ಹಚ್ಚೊಳ್ಳಿ ಪಿಎಸ್‌ಐ ಕುಮಾರಸ್ವಾಮಿ, ನಗರಸಭೆ ಆಯುಕ್ತ ಗುರುಪ್ರಸಾದ್, ವಿವಿಧ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.