ಜಿಲ್ಲೆ

ಜನರಿಗೆ ಬಿ-ಖಾತೆ ನೀಡಲು ಕ್ರಮವಹಿಸಿ

ಪ್ರವೀಣ ಉದುಸಾ ದಲಬಂಜನ್

ಸಿರಗುಪ್ಪ: ಸ್ಥಳೀಯ ನಗರಸಭೆಯಲ್ಲಿ ಅಧ್ಯಕ್ಷೆ ಬಿ.ರೇಣುಕಮ್ಮ ಮತ್ತು ಉಪಾಧ್ಯಕ್ಷೆ ಯಶೋದಾ ಮೂರ್ತಿ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ಗುರುವಾರ ನಡೆಯಿತು.

ನಗರಸಭೆ ಪೌರಾಯುಕ್ತ ಎಚ್.ಎನ್.ಗುರುಪ್ರಸಾದ್ ಮಾತನಾಡಿ, 2025-26ನೇ ಸಾಲಿನ ಎಸ್.ಎಫ್.ಸಿ ಅನುದಾನದಡಿ ಎಸ್‌ಸಿಪಿ ಯೋಜನೆಗೆ 27 ಲಕ್ಷ ರೂ., ಟಿಎಸ್‌ಪಿ ಯೋಜನೆಗೆ 11 ಲಕ್ಷ ರೂ. ಮತ್ತು ಬಂಡವಾಳ ಆಸ್ತಿಗಳ ಸೃಜನೆಗಾಗಿ 17 ಲಕ್ಷ ರೂ. ಹಾಗೂ 15ನೇ ಹಣಕಾಸು ಯೋಜನೆಯ ನಿರ್ಬಂಧಿತ ಅನುದಾನದಡಿ 2.7 ಕೋಟಿ ರೂ., ಮುಕ್ತ ಅನುದಾನದಡಿ 1.38 ಕೋಟಿ ರೂ. ಒಟ್ಟು 3.46 ಕೋಟಿ ರೂ. ಹಂಚಿಕೆಯಾಗಿದೆ ಎಂದು ತಿಳಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ 12 ಮೀ. ಎತ್ತರದ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲು ಟೆಂಡರ್ ಪ್ರಕ್ರಿಯೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಪ್ರತಿವರ್ಷ ಅಂಗವಿಕಲರ ಜೀವ ವಿಮೆ ಪಾಲಿಸಿಗೆ ಹಣ ಸಂದಾಯ ಮಾಡುವ ಬದಲಿಗೆ ಅಂಗವಿಕಲರು ಜೀವನ ನಡೆಸಲು ಸ್ವ ಉದ್ಯೋಗ ಯೋಜನೆ ಜಾರಿಗೊಳಿಸಬೇಕೆಂದು ಮಲ್ಲಿಕಾರ್ಜುನ ಸಲಹೆ ನೀಡಿದರು.

ಬಿ-ಖಾತೆ ಅರ್ಜಿ ಸಲ್ಲಿಕೆ ಆರಂಭವಾಗಿ ಮೂರು ತಿಂಗಳು ಕಳೆದರೂ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ಮುರುಳಿ ಮೋಹನ್ ಆರೋಪಿಸಿದರು. ಎಇಇ ಗಂಗಾಧರ ಗೌಡ, ಸದಸ್ಯರು, ಸಿಬ್ಬಂದಿ ಇದ್ದರು.