ಚಿಕ್ಕಮಗಳೂರು ಸಿವಿಲ್ ಇಂಜಿನಿರ‍್ಸ್ ಸಂಘದಿAದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಿ.ಟಿ.ರವಿ, ಗವಿರಂಗಪ್ಪ, ಜಿ.ರಮೇಶ್, ಬಿ.ಸಿ.ಬಸವರಾಜ್, ಕೆ.ಪಿ.ನಾಗೇಂದ್ರ ಮತ್ತಿತರರಿದ್ದರು. 
ಜಿಲ್ಲೆ

ಸರ್.ಎಂ.ವಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಠಿ ಮತ್ತು ಪ್ರಾಮಾಣಿಕತೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಚಿಕ್ಕಮಗಳೂರು ಸಿವಿಲ್ ಇಂಜಿನಿರ‍್ಸ್ ಸಂಘದಿAದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಹೊಸ ತಾಂತ್ರಿಕತೆಯಲ್ಲಿ ಇಡೀ ಜಗತ್ತೇ ಪ್ರಗತಿ ಸಾಧಿಸಿದರೂ ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಯ ಕೊರತೆಯಿಂದಾಗಿ ಉದ್ಘಾಟನೆಗೊಳ್ಳುವ ಮೊದಲೇ ಕಟ್ಟಡ ಮತ್ತು ಸೇತುವೆಗಳು ಮುರಿತು ಬೀಳುತ್ತಿವೆ. ವಿಶ್ವೇಶ್ವರಯ್ಯ ಅವರ ದೂರದೃಷ್ಠಿ ಮತ್ತು ಪ್ರತಿಭೆಗೆ ಮೈಸೂರಿನ ಕನ್ನಂಬಾಡಿ ಅಣೆಕಟ್ಟು ಸಾಕ್ಷಿಯಾಗಿ ನಿಂತಿದೆ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಭಾರತೀಯ ತಂತ್ರಜ್ಞಾನದ ಜೊತೆಗೆ ವಿಜ್ಞಾನವೂ ಒಂದಾಗಬೇಕಿದೆ. ವಿಜ್ಞಾನದ ಸಂಗಮದೊAದಿಗೆ ನವ ಭಾರತದ ನಿರ್ಮಾಣವಾಗಬೇಕಿದೆ. ದೇಶದ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ವಿಶ್ವೇಶ್ವರಯ್ಯ ಅವರು ಕೇವಲ ಮೇಧಾವಿಯಾಗಿರಲಿಲ್ಲ. ಮೇಧಾವಿಯ ಜೊತೆಗೆ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದರು.
ಧರ್ಮವಿಲ್ಲದ ವಿಜ್ಞಾನ ಕುರುಡು. ದೇಶದ ಪ್ರಗತಿಗೆ ಧರ್ಮ ಮತ್ತು ವಿಜ್ಞಾನ ಎರಡೂ ಬೇಕು. ಧರ್ಮ ಎಂದ ತಕ್ಷಣವೇ ಅದನ್ನು ಬಣ್ಣದ ಲೆಕ್ಕದಲ್ಲಿ ಗುರುತಿಸಬಾರದು. ಧರ್ಮ ಉಡುದಾರ, ಶಿವದಾರ, ಜನಿವಾರಕ್ಕೆ ಸಂಬAಧಿಸಿದ್ದಲ್ಲ. ನಮ್ಮ ದೇಶದಲ್ಲಿ ಧರ್ಮ ಎಂದರೆ ಸತ್ಯವನ್ನು ಆಚರಿಸುವಂತಹದ್ದು. ಈ ಕಾರಣದಿಂದಲೇ ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ ಬದುಕಿನ ಉದ್ದಕ್ಕೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ದೂರದೃಷ್ಠಿ ಆಲೋಚನೆಗಳು ಮತ್ತು ಪ್ರಾಮಾಣಿಕ ವೃತ್ತಿ ಜೀವನವನ್ನು ಈಗಿನ ಎಲ್ಲಾ ಸಿವಿಲ್ ಇಂಜಿನಿಯರ್‌ಗಳು ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮ ದಿನಾಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ಎಐಟಿ ಕಾಲೇಜು ಪ್ರಾಚಾರ್ಯ ಡಾ. ಜಯದೇವ್ ಮಾತನಾಡಿ, ಹಳ್ಳಿಗಾಡಿನ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದುಬಂದ ಸರ್. ಎಂ. ವಿಶ್ವೇಶ್ವರಯ್ಯನವರ ಜ್ಞಾನಶಕ್ತಿ, ಇಚ್ಚಾಶಕ್ತಿಯಿಂದ ಓರ್ವ ಪ್ರಾಮಾಣಿಕ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಭಾರತ ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ನಡೆಯಬೇಕಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ ಮಾತನಾಡಿ, ಭಾರತ ದೇಶದ ಅಭಿವೃದ್ಧಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಪಾತ್ರ ಅತಿ ಪ್ರಾಮುಖ್ಯತೆ ಪಡೆದಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದರ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲಾ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಯನ್ನು ಹೊಸ ಕಟ್ಟಡದ ಮುಂದೆ ಸ್ಥಳಾಂತರಿಸದೇ ಈ ಪುತ್ಥಳಿಯನ್ನು ಇಲ್ಲೇ ಇರಿಸಬೇಕು. ಲೋಕೋಪಯೋಗಿ ಇಲಾಖೆಯ ಹೊಸ ಕಟ್ಟಡದ ಮುಂದೆ ಬೇರೊಂದು ಪುತ್ಥಳಿಯನ್ನು ಸ್ಥಾಪಿಸಿ, ಹಳೇ ಕಟ್ಟಡದ ಮುಂದಿರುವ ವಿಶ್ವೇಶ್ವರಯ್ಯ ಅವರ ಪುತ್ಥಳಿಯನ್ನು ನಿರ್ವಹಣೆ ಜವಾಬ್ದಾರಿಯನ್ನು ಸಿವಿಲ್ ಇಂಜಿನಿಯರ್ ಸಂಘಕ್ಕೆ ನೀಡುವಂತೆ ಮನವಿ ಮಾಡಿದರು.
ನಗರಸಭೆ ಆಯುಕ್ತರಾದ ಬಿ.ಸಿ. ಬಸವರಾಜ್ ಮಾತನಾಡಿ, ನಗರದ ಬೇಲೂರು ರಸ್ತೆಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರು ನಾಮಕರಣ ಮಾಡುವಂತೆ ಸಿವಿಲ್ ಇಂಜಿನಿರ‍್ಸ್ ಸಂಘದಿAದ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಗೆ ನಗರಸಭೆ ಅಂಕಿತ ಹಾಕಿದೆ. ಸೆ. ೨೦ರಂದು ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಾಗರತ್ನ, ನಗರಸಭೆ ಇಂಜಿನಿಯರ್ ಎಂ.ಡಿ. ಲೋಕೇಶ್, ಇಂಜಿನಿಯರ್ ಸಂಘದ ಪೂರ್ವಾಧ್ಯಕ್ಷ ಕೆ.ಪಿ. ನಾಗೇಂದ್ರ, ಸಂಘದ ಖಜಾಂಚಿ ಅಬ್ದುಲ್ ಕಬೀರ್, ಉಪಾಧ್ಯಕ್ಷ ಟಿ. ನಾರಾಯಣಸ್ವಾಮಿ, ಇಂಜಿನಿಯರ್ ಸಂಘದ ಕೋ-ಆರ್ಡಿನೇಟರ್ ವೆಂಕಟೇಶ್, ಜಿಪಂ ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್ ಉಪಸ್ಥಿತರಿದ್ದರು.