ಜಿಲ್ಲೆ

ಸರ್ ಎಂ.ವಿ. ಯೋಜನೆಗಳು ಸದಾ ಸ್ಮರಣೀಯ

ಹುಬ್ಬಳ್ಳಿ : ಸರ್ ಎಂ. ವಿಶ್ವೇಶ್ವರಯ್ಯನವರು ಬಡತನದಲ್ಲಿ ಅರಳಿದ ಮಹಾ ಪ್ರತಿಭೆ. ಇಂಜಿನೀಯರ್ ಆಗಿ ದೇಶ-ವೀದೇಶಗಳಲ್ಲಿ ಅಸಾಮಾನ್ಯವಾದ ಅಣೆಕಟ್ಟುಗಳು, ಉದ್ದಿಮೆಗಳು, ನೀರು ಸರಬರಾಜು ಸೇರಿದಂತೆ ಹಲವಾರು ಯೋಜನೆಗಳನ್ನು ನಿರ್ವಿುಸಿದ್ದಾರೆ ಎಂದು ನಿವೃತ್ತ ಇಂಜಿನಿಯರ್ ಎಸ್.ಎಂ. ತೋಗರ್ಸಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಉಣಕಲ್ ಕ್ರಾಸ್​ನ ವಿಶ್ವಭಾರತಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಠಯೋಗಿ ಶ್ರೀ ಸಿದ್ದಪ್ಪಜ್ಜ ಸ್ಮಾರಕ ದತ್ತಿ, ದಿ. ಆರೂರ ಲಕ್ಷ ಣ ಶೇಟ್ ಹಾಗೂ ಡಾ. ಪ್ರಹ್ಲಾದ ಅಗಸನಕಟ್ಟಿ ಸ್ಮರಣಾರ್ಥ ದತ್ತಿ ಅಂಗವಾಗಿ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ ಎಂ. ವಿಶ್ವೇಶ್ವರಯ್ಯ ಅವರು ನಿರ್ವಿುಸಿರುವ ಯೋಜನೆಗಳು ಇಂದಿಗೂ ದಂತ ಕಥೆಯಂತಿವೆ. ಎಲ್ಲ ಕಾಲದ ಇಂಜಿನಿಯರ್​ಗಳಿಗೆ ಅವರೊಬ್ಬ ಮಾದರಿ ಎಂದರು.

ಉದ್ಘಾಟಿಸಿ ಮಾತನಾಡಿದ ಪ್ರೊ. ಎಚ್.ಎಸ್. ಚವಡಾಪುರ, ಸರ್ ಎಂ. ವಿಶ್ವೇಶ್ವರಯ್ಯ ಅವರು ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಅನುಪಮವಾಗಿದ್ದು, ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.

ಪ್ರೊ. ಲಿಂಗರಾಜ ಅಂಗಡಿ, ಪ್ರಾಚಾರ್ಯ ಬಿ.ಜಿ. ಗೋಪಾಲ, ಡಾ. ಭಾರತಿ ಹಿರೇಮಠ ಮಾತನಾಡಿದರು. ವೆಂಕಣ್ಣ ಕಿರೇಸೂರ ಅಧ್ಯಕ್ಷತೆ ವಹಿಸಿದ್ದರು.

ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಾದ ಸಿ.ಬಿ. ಮರಿಗೌಡರ, ಸೋಮಶೇಖರ ಇಟಗಿ, ಚನ್ನಬಸಪ್ಪ ಧಾರವಾಡ ಶೆಟ್ಟರ, ಸಿದ್ದಮ್ಮ ಅಡವೆನ್ನವರ, ಅನಸೂಯಾ ಪಾಟೀಲ, ಸಿ.ಎಂ. ಚನ್ನಬಸಪ್ಪ, ಮೋಹನ ಗುಂಡ್ಲೂರ, ಪ್ರೊ. ರಾಜೇಶ್ವರಿ ತೋಟಗಿ, ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮುಸ್ಕಾನ ನದಾಫ ಪ್ರಾರ್ಥಿಸಿದರು. ಪ್ರೊ. ತ್ರಿವೇಣಿ ಚಿಪ್ಪಾಡಿ ನಿರೂಪಿಸಿದರು. ವಿದ್ಯಾ ವಂಟಮುರಿ ವಂದಿಸಿದರು.