filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.37675962, 0.17484385);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ಜಿಲ್ಲೆ

ಶ್ರೀಗಳ ಪ್ರವೇಶ ನಿಷೇಧ ಹಿಂಪಡೆಯಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಕನ್ಹೇರಿ ಮಠದ ಅದಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ಹೇರಿದ ನಿಷೇಧ ಖಂಡಿಸಿ ಪಟ್ಟಣದಲ್ಲಿ ಬಸವಾದಿ ಶರಣರ ಹಿಂದು ವೇದಿಕೆಯಿಂದ ಪ್ರತಿಭಟಿಸಿ, ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಭಾರತೀಯ ಸಂಸತಿ, ಪರಂಪರೆ, ಕೃಷಿ ಬೆಳೆಸಲು ಶ್ರೀಗಳು ತೊಡಗಿಸಿಕೊಂಡಿದ್ದಾರೆ. ಹೀಗಿದ್ದಾಗ ವಿಜಯಪುರ ಜಿಲ್ಲೆಯ ಪ್ರವೇಶ ನಿಷೇಧಿಸಿದ ಕ್ರಮ ಖಂಡಿಸುತ್ತೇವೆ. ಇದು ಕನ್ಹೇರಿ ಶ್ರೀಗಳಿಗೆ ಮಾಡಿದ ಅವಮಾನವಲ್ಲ. ದೇಶದ ಸಾಧು ಸಂತರಿಗೆ ಮಾಡಿದ ಅವಮಾನ. ಸರ್ಕಾರದಿಂದ ಲಿಂಗಾಯತರನ್ನು ಒಡೆಯುವ ಷಡ್ಯಂತ್ರ ನಡೆದಿದೆ. ಕಾಡಸಿದ್ದೇಶ್ವರ ಶ್ರೀಗಳ ನಿಷೇಧ ತಣ ಮರಳಿ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಖಂಡ ವಿರೂಪಾ ಮಾಮನಿ ಮಾತನಾಡಿ, ಕನ್ಹೇರಿ ಶ್ರೀಗಳ ಜಿಲ್ಲೆಗೆ ಪ್ರವೇಶ ರ್ನಿಬಂಧಿಸಿದ್ದು ಖಂಡನೀಯ. ಕಾಂಗ್ರೆಸ್​ ಸರ್ಕಾರ ಹಿಂದುಗಳಲ್ಲಿ ಒಡಕು ತರುವ ಪ್ರಯತ್ನ ಮಾಡುತ್ತಿರುವುದನ್ನು ನಿಲ್ಲಿಸಬೇಕು. ವೀರಶೆವ ಲಿಂಗಾಯತರನ್ನು ಹಿಂದು ಧರ್ಮದಿಂದ ಒಡೆಯುತ್ತಿರುವ ಸಚಿವರನ್ನು ನಿಯಂತ್ರಿಸಬೇಕು. ಇಲ್ಲವಾದರೆ ಹೋರಾಟ ನಡೆಯಲಿದೆ ಎಂದರು.

ಶಿಂದೋಗಿಯ ನಿತ್ಯಾನಂದ ಮಠದ ಮುಕ್ತಾನಂದ ಶ್ರೀ ಮಾತನಾಡಿ, ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸುವ ಶ್ರೀಗಳಿಗೆ ನಿರ್ಬಂಧಿಸಿದ್ದು ಅಮ್ಯ ಅಪರಾಧ ಎಂದರು.

ಚಿಕ್ಕುಂಬಿ ಅಜಾತ ನಾಗಲಿಂಗ ಶ್ರೀಗಳು, ಉಗರಗೋಳದ ಸಚ್ಚಿದಾನಂದ ಅವಧೂತರು, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಮಲ್ಲು ಬೀಳಗಿ, ಶಂಕರ ವನ್ನೂರ, ಮಡಿವಾಳಪ್ಪ ಬಿದರಗಡ್ಡಿ, ಕುಮಾರಸ್ವಾಮಿ ತಲ್ಲೂರಮಠ ಇತರರಿದ್ದರು.