ಜಿಲ್ಲೆ

ಗಾಯನ, ಕೋಲಾಟ ಸ್ಪರ್ಧೆ 23ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಿತ್ತೂರ ವಿಜಯೋತ್ಸವ ನಿಮಿತ್ತ ಕರ್ನಾಟಕ ವಿದ್ಯಾವರ್ಧಕ ಸಂಘವು ಅ. 23ರಂದು ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಹಾಗೂ ಕೋಲಾಟ ಸ್ಪರ್ಧೆ ಏರ್ಪಡಿಸಿದೆ. ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದು.
ಆಸಕ್ತರು ಅ. 21ರೊಳಗೆ ಕಾಲೇಜುಗಳ ಹೆಸರನ್ನು ವಿದ್ಯಾರ್ಥಿಗಳ ಪಟ್ಟಿ ಸಮೇತ ನೀಡಬೇಕು. ದೇಶ ಭಕ್ತೀಗಿತೆ ಸ್ಪರ್ಧೆಯಲ್ಲಿ ಭಾಗವಹಿಸುವವರು ವಾದ್ಯ, ಪರಿಕರಗಳನ್ನು ತರಬೇಕು. ಸಮೂಹ ಗೀತೆ ಸ್ಪರ್ಧೆಯಲ್ಲಿ 4 ರಿಂದ 8 ಜನಕ್ಕೆ ಮಾತ್ರ ಅವಕಾಶವಿದ್ದು, ಒಂದು ತಂಡಕ್ಕೆ 5 ನಿಮಿಷಗಳ ಕಾಲಾವಕಾಶವಿದೆ.
ಕೋಲಾಟ ಸ್ಪರ್ಧೆಯಲ್ಲಿ ತಂಡದಲ್ಲಿ 8 ರಿಂದ 12 ಜನಕ್ಕೆ ಅವಕಾಶವಿದ್ದು, ಒಂದು ತಂಡಕ್ಕೆ 8 ರಿಂದ 10 ನಿಮಿಷಗಳ ಕಾಲಾವಕಾಶವಿದೆ. ಎಲ್ಲ ಸ್ಪರ್ಧೆಗಳು ಬೆಳಗ್ಗೆ 10 ಗಂಟೆಗೆ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿದ್ದು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.