ಜಿಲ್ಲೆ

ರಾಮೋತ್ಸವ ಕಾರ್ಯಕ್ರಮದಲ್ಲಿ ಗಾಯನ

Mysuru - Desk - Ravikumar


ಹಾಸನ: ಅರಕಲಗೂಡು ಪಟ್ಟಣದ ಕೋಟೆ ಶ್ರೀಕೋದಂಡರಾಮ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಮೈಸೂರಿನ ಎನ್. ಶಶಾಂಕ್ ಭಕ್ತಿ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಪುರಂದರ ದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತ್ ಮೊದಲಾದ ವಾಗ್ಗೇಯಕಾರರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಯುವ ಗಾಯಕ ಜನರನ್ನು ನಾದದ ಅಲೆಯಲ್ಲಿ ತೇಲಿಸಿದರು. ಹಾಸನದ ರಾಘವೇಂದ್ರ ವಯೋಲಿನ್, ಮಂಜುನಾಥ್ ಮೃದಂಗ ಸಾಥ್ ನೀಡಿದರು.

ಕೋದಂಡರಾಮ ದೇವಾಲಯದ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಕಾರ್ಯದರ್ಶಿ ಎ.ಎನ್. ಗಣೇಶಮೂರ್ತಿ, ಕೆ.ವಿ. ಪ್ರಭಾಕರ್ ಕಲಾವಿದರನ್ನು ಗೌರವಿಸಿದರು.