ಮೈಸೂರು: ಅರಮನೆ ವೇದಿಕೆಯಲ್ಲಿ ಹಾಡಿ ಮಕ್ಕಳ ಹಾಡು, ಪಾಡು ನೋಡುಗರ ಮಂತ್ರ ಮುಗ್ದಗೊಳಿಸಿತು.
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆರಮನೆಗೆ ಆಗಮಿಸಿ ಅರಮನೆಯಲ್ಲಿ ಬೀಡು ಬಿಟ್ಟಿರುವ ಕಾವಾಡಿ, ಮಾವುತರ ಮಕ್ಕಳು ಝಗಮಗಿಸುವ ವಿದ್ಯುತ್ ದೀಪಾಲಂಕಾರದ ಮಧ್ಯೆ ತಮ್ಮ ಕಾಡಿನ ಹಾಡುಗಳನ್ನು ನಾಡಿನ ಜನರಿಗೆ ಪರಿಚಯಿಸಿ ಗಮನ ಸೆಳೆದರು.
ಅಕ್ಬರ್ ತಂಡದಿಂದ ಸುಗಮ ಸಂಗೀತ, ಚೈತನ್ಯ ಷಡಕ್ಷರಿ ತಂಡದಿಂದ ಭರತನಾಟ್ಯ, ಉಸ್ತಾದ್ ಫಯಾಜ್ ಖಾನ್ ಮತ್ತು ಉಸ್ತಾದ್ ಶಫೀಕ್ ಖಾನ್‌ರಿಂದ ಹಿಂದುಸ್ತಾನಿ ಗಾಯನ ಮತ್ತು ಸಿತಾರ್ ಜುಗಲ್‌ಬಂದಿ ಸಂಗೀತ ಲೋಕ ತೆರೆದಿಟ್ಟಿತು.
ಡಾ.ಜ್ಯೋತ್ಸಮ ಶ್ರೀಕಾಂತ್ ತಂಡದಿಂದ ವೀಣಾವಾದನ, ಸುಧಾ ರಘುನಾಥನ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜನರ ತಲೆದೂಗುವಂತೆ ಮಾಡಿತು.