ಸಿಂದಿಗೇರಿ ಗ್ರಾಪಂಗೆ ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಗಾದೆಮ್ಮ ಹಾಗೂ ಹೊನ್ನೂರಮ್ಮ ಅವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಪಿ.ಟಿ.ವಸಂತ್, ಪಿಡಿಒ ಮಂಜುನಾಥ, ಕಾರ್ಯದರ್ಶಿ ಸೋಮಲಿಂಗಪ್ಪ, ಸರ್ವ ಸದಸ್ಯರು ಇದ್ದರು. 
ಜಿಲ್ಲೆ

ಸಿಂದಿಗೇರಿ ಗ್ರಾಪಂಗೆ ಗಾದೆಮ್ಮ ಅಧ್ಯಕ್ಷೆ

ಕುರುಗೋಡು: ಸಿಂದಿಗೇರಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಗಾದೆಮ್ಮ ಹಾಗೂ ಹೊನ್ನೂರಮ್ಮ ಆಯ್ಕೆಯಾದರು.

ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಗಾದೆಮ್ಮ, ಪವಿತ್ರ ಹಾಗೂ ಎಸ್ಟಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನೂರಮ್ಮ ಮತ್ತು ತಳವಾರ್ ಹನುಮಂತಮ್ಮ ನಾಮಪತ್ರ ಸಲ್ಲಿಸಿದ್ದರು. ಗಾದೆಮ್ಮ ಅವರು 15 ಮತಗಳನ್ನು ಪಡೆದು ಅಧ್ಯಕ್ಷೆಯಾದರು.

ಪವಿತ್ರ 10 ಮತ ಪಡೆದು ಸೋತರು. ತಳವಾರ್ ಹನುಮಂತಮ್ಮ 12 ಮತ ಪಡೆದು ಪರಾಭವಗೊಂಡರೆ, ಹೊನ್ನೂರಮ್ಮ 13 ವೋಟ್ ಪಡೆದು ಗೆಲ್ಲುವ ಮೂಲಕ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದರು. ಪಿ.ಟಿ.ವಸಂತ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಮಂಜುನಾಥ, ಕಾರ್ಯದರ್ಶಿ ಸೋಮಲಿಂಗಪ್ಪ, ಸರ್ವ ಸದಸ್ಯರು ಇದ್ದರು.