ಸಿಂಧನೂರು ನಗರದ ಬಪ್ಪೂರ ಮಾರ್ಗದಲ್ಲಿರುವ ಹಳ್ಳ ತುಂಬಿ ಹರಿಯುತ್ತಿರುವುದು. 
ಜಿಲ್ಲೆ

ಸಿಂಧನೂರು ತಾಲೂಕಲ್ಲಿ ಸತತ ಮಳೆಗೆ ನೆಲಕ್ಕುರುಳಿದ ಮಲ್ಲಾಪುರ ಗ್ರಾಮದ ಹಳೇಯ ಶ್ರೀಮಠ

ಸಿಂಧನೂರು: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ನಿರಂತರ ಸುರಿದ ಮಳೆಯಿಂದ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದ್ದು, ಮಲ್ಲಾಪುರ ಗ್ರಾಮದ ಹಳೆಯದಾದ ಈಶ್ವರ ಶ್ರೀಮಠ ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ನಗರದ ಹಿರೇಹಳ್ಳ ಸೇರಿ ಗ್ರಾಮೀಣ ಪ್ರದೇಶದ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ನಗರದ ಕೆಲ ಕಾಲನಿಗಳನ್ನು ಮಳೆ ನೀರಿನಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಗಂಗಾನಗರ, ಮಹಿಬೂಬಿಯಾ ಕಾಲನಿಯ ರಸ್ತೆಗಳು ಕೆಸರುಮಯವಾಗಿವೆ.

ಮಲ್ಲಾಪುರ ಗ್ರಾಮದ ಸುಮಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈಶ್ವರ ಶ್ರೀಮಠ ಮಣ್ಣಿನ ಗೋಡೆಯಾಗಿದ್ದರಿಂದ ನಿರಂತರ ಮಳೆಯಿಂದ ಬಿದ್ದಿದೆ. ಯಾರು ವಾಸ ಮಾಡುತ್ತಿಲ್ಲ. ಇದರಿಂದ ಅನಾಹುತ ಸಂಭವಿಸಿಲ್ಲ.