ಸಿಂಧನೂರು: ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಆತ್ಮಬಲ, ಶಿಸ್ತು, ಸಹಕಾರ, ಸಹೋದರತ್ವ, ಪ್ರಕೃತಿ ಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಕಾರ್ಯ ಮಾಡುತ್ತದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ ಹೇಳಿದರು.
ಇದನ್ನೂ ಓದಿ: ಜವಾಬ್ದಾರಿ ಕಲಿಕೆಗೆ ಸ್ಕೌಟ್ಸ್-ಗೈಡ್ಸ್ ನೆರವು
ನಗರದ ಸುಕಾಲಪೇಟೆಯ ಕನಕದಾಸ ಶಿಕ್ಷಣ ಸಂಸ್ಥೆ ಪ್ರೌಢಶಾಲೆ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ ಉದ್ಘಾಟಿಸಿ ಶನಿವಾರ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಸ್ಥಳೀಯ ಘಟಕದ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ಶಿಕ್ಷಕ ಆಂಜನೇಯ, ಹನುಮಂತಪ್ಪ ಬೇರಗಿ, ಮಂಗಲಾ, ಪ್ರೌಢಶಾಲೆಯ ಶಿಕ್ಷಕರಾದ ನಾಗಲಿಂಗನಗೌಡ, ಅಶೋಕ ಪರಾಂಡೆ, ಸಣ್ಣ ರಾಮಯ್ಯ, ಪವನಕುಮಾರ, ಮಲ್ಲಿಕಾರ್ಜುನ ಪೂಜಾರ, ಶಾರದಮ್ಮ ಇದ್ದರು.