ಸಿಂಧನೂರು:ತಾಲೂಕಿನ ರಾಮತ್ನಾಳ ಗ್ರಾಪಂ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮೂಲಭೂತ ಸೌಕರ್ಯಗಳಾದ ಮನೆ,ಕುಡಿವ ನೀರು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಾಲ್ಕನೇ ಕಾಲಿಟ್ಟಿದ್ದು ಸ್ಥಳಕ್ಕೆ ಅಧಿಕಾರಿಗಳು ಬಾರದಿರುವುದನ್ನು ಖಂಡಿಸಿ, ಪ್ರತಿಭಟನೆ ನಿರತರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ರಾಮತ್ನಾಳ ಗ್ರಾಪಂ ಕಚೇರಿಯ ಮುಂದೆ ನಿರಂತರ ಪ್ರತಿಭಟನೆ ನಡೆಸಿದ್ದು ತಾಲೂಕ ದಂಡಾಧಿಕಾರಿ ಹಾಗೂ ತಾಪಂ ಇಒ ನಮ್ಮ ಹೋರಾಟಕ್ಕೆ ಕಿಮ್ಮತ್ತು ಕೋಡದೆ ದಲಿತ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದಲ್ಲಿ ವಾಸಮಾಡುವ ಕೃಷಿ ಕೂಲಿಕಾರರಿಗೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಾದ ಮನೆ,ಕುಡಿವ ನೀರು, ಚರಂಡಿ, ಸಿಸಿ ರಸ್ತೆ ,ಸ್ಮಶಾನ ಒದಗಿಸುತ್ತಿಲ್ಲ. ಹಾಗೂ ಪಂಚಾಯಿತಿ ಅಭಿವೃದ್ಧಿಯ ದುರಾಡಳಿತದ ವಿರುದ್ಧ ನಮ್ಮ ಹೋರಾಟವಾಗಿದ್ದು ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನೆ ನಿರತರು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಮೌನೇಶ ದಿದ್ದಿಗಿ, ನಿಂಗಪ್ಪ ದಿದ್ದಿಗಿ, ಸುರೇಶ ಬಳಗಾನೂರು, ಕರಿಯಪ್ಪ ರಾಮತ್ನಾಳ,ನಾಗರಾಜ ರಾಮತ್ನಾಳ, ರಡ್ಡೆಪ್ಪ ರಾಮಾತ್ನಾಳ, ದೇವೇಂದ್ರಪ್ಪ, ಹನುಮಂತ, ಯಲ್ಲಪ್ಪ, ಮಲ್ಲಮ್ಮ, ಹನುಮಂತಿ, ಶರನಮ್ಮ, ಮೀನಾಕ್ಷಿ, ನಿಂಗಪ್ಪ ಹುನಗುಂದ, ಶ್ರೀಧರ ದಿದ್ದಿಗಿ ವಿರಭದ್ರಪ್ಪ, ಮಹೆಬೂಬ್‌ಸಾಬ್ ಇದ್ದರು.