ಸಿಂಧನೂರಿನಲ್ಲಿ ಸೋಮವಾರ ಆಗಮಿಸಿದ ವಾಯು ಮಾಲಿನ್ಯ ನಿಯಂತ್ರಣ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾ ವಾಹನ ಸ್ವಾಗತಿಸಲಾಯಿತು. ಶಹರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಎಚ್. ಬಸವರಾಜ, ಕುಮಾರಸ್ವಾಮಿ ಇದ್ದರು. 
ಜಿಲ್ಲೆ

ಅತೀಯಾದ ಇಂಧನ ಬಳಕೆ ಬೇಡ

ಸಿಂಧನೂರು: ವಾಯು ಮಾಲಿನ್ಯ ನಿಯಂತ್ರಣಕ್ಕೆ ಜನ ಜಾಗೃತಿ ಜತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಬಸವರಾಜ ಹೇಳಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ನಗರಕ್ಕೆ ರಾಯಚೂರಿನಿಂದ ಆಗಮಿಸಿದ ವಾಯು ಮಾಲಿನ್ಯ ನಿಯಂತ್ರಣ ಕುರಿತ ಅರಿವು ಮೂಡಿಸುವ ಜಾಗೃತಿ ಜಾಥಾ ವಾಹನ ಸ್ವಾಗತಿಸಿ ಮಾತನಾಡಿದರು. ಅತೀಯಾದ ಇಂಧನ ಬಳಕೆಯಿಂದ ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದರು.
ಇಂಧನವನ್ನು ಮಿತವಾಗಿ ಬಳಸಬೇಕು. ಪರಿಸರ ಬಗ್ಗೆ ಕಾಳಜಿ ಹೊಂದಬೇಕು. ವಾಹನಗಳನ್ನು ಕಾಲಕಾಲಕ್ಕೆ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಪರೀಕ್ಷಿಸಬೇಕು. ವಾಹನ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಧಿಕೃತ ಕೇಂದ್ರಗಳಲ್ಲಿ ಮಾತ್ರ ವಾಹನಗಳಿಗೆ ಇಂಧನ ಭರಿಸಬೇಕು. ಅನಾವಶ್ಯಕವಾಗಿ ಕರ್ಕಷ ಶಬ್ಧಕ್ಕೆ ಅವಕಾಶ ನೀಡಬಾರದು ಎಂದರು. ಠಾಣೆಯ ಪಿಎಸ್‌ಐ ಕುಮಾರಸ್ವಾಮಿ, ಸಿಬ್ಬಂದಿ ಇದ್ದರು.
ಜಾಗೃತಿ ಜಾಥಾ ನಗರ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಡಿಜಿಟಲ್ ಎಲ್‌ಇಡಿಯಲ್ಲಿ ವಿಡಿಯೋ ಪ್ರದರ್ಶನ ಮಾಡಿತು.