ಜಿಲ್ಲೆ

ಶ್ರೀ ಅಂಬಾದೇವಿ ದೇವಸ್ಥಾನ ಜೀರ್ಣೋದ್ಧಾರ ಕುರಿತು ಜ.18 ಪೂರ್ವಭಾವಿ ಸಭೆ: ಶಾಸಕ ವೆಂಕಟರಾವ ನಾಡಗೌಡ ಮಾಹಿತಿ

ಸಿಂಧನೂರು: ತಾಲೂಕಿನ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾನ ಪ್ರಾಂಗಣ, ನೂತನ ಶಿಲಾ ಸ್ತಂಭ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಶಿಲೆ, ಡಿಸೈನ್ ಕುರಿತು ಚರ್ಚಿಸಲು ಜ. 18 ರಂದು ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾನ ಪ್ರಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಯಾವ ಶಿಲೆ ಕೆತ್ತನೆ, ತಗಲುವ ವೆಚ್ಚದ ಎಸ್ಟಿಮೇಟ್, ಶೀಘ್ರದಲ್ಲಿ ಕೆಲಸ ಮುಗಿಸುವುದರ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ದೇವಸ್ಥಾನ ಜೀರ್ಣೋದ್ಧಾರಕ್ಕೆ ಭಕ್ತರು ದೇಣಿಗೆ ಕೊಡುವವರಿದ್ದರೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಅಕೌಂಟ್ ನಂಬರ್ ಕೊಡಲಾಗುವುದು. ಆ ಅಕೌಂಟ್‌ಗೆ ದೇಣಿಗೆ ನೀಡಬಹುದು ಎಂದರು.

ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ಸಭೆಗೆ ಮಾಹಿತಿ ನೀಡಿದರು. ಸಿಪಿಐ ಚಂದ್ರಶೇಖರ ಇದ್ದರು.