ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಾವುಟಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿರುವುದನ್ನು ಖಂಡಿಸಿ ತುರ್ವಿಹಾಳ ಡಿ.ಶಂಕರಗೌಡ ಸ್ಮಾರಕ ಯುವಕ ಮಂಡಳಿ ಸಿಂಧನೂರು ತಾಲೂಕಿನ ತುರ್ವಿಹಾಳ ನಾಡಕಚೇರಿ ಸಿಬ್ಬಂದಿ ಸಂಗಮೇಶರಿಗೆ ಮನವಿ ಸಲ್ಲಿಸಿತು.  
ಜಿಲ್ಲೆ

ಶಿವಸೇನೆಯ ಎಲ್ಲ ಕಾರ್ಯಕರ್ತರನ್ನು ಬಂಧಿಸಲು ತುರ್ವಿಹಾಳ ಡಿ.ಶಂಕರಗೌಡ ಸ್ಮಾರಕ ಯುವಕ ಮಂಡಳಿ ಮನವಿ

ಸಿಂಧನೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಾವುಟಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿರುವ ಶಿವಸೇನೆಯ ಎಲ್ಲ ಕಾರ್ಯಕರ್ತರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತುರ್ವಿಹಾಳ ಡಿ.ಶಂಕರಗೌಡ ಸ್ಮಾರಕ ಯುವಕ ಮಂಡಳಿ, ನಾಡಕಚೇರಿ ಸಿಬ್ಬಂದಿ ಸಂಗಮೇಶರಿಗೆ ಮನವಿ ಸಲ್ಲಿಸಿತು.

ಕನ್ನಡ ಬಾವುಟವನ್ನು ಸುಟ್ಟುಹಾಕಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿದೆ. ಇದರಿಂದ ರಾಜ್ಯಕ್ಕೆ ತುಂಬಾ ಅಪಮಾನವಾಗಿದ್ದು, ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಬಂಧಿಸದೆ ಇದ್ದಲ್ಲಿ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಮಂಡಳಿ ಎಚ್ಚರಿಸಿದೆ.

ಮಂಡಳಿ ಪದಾಧಿಕಾರಿಗಳಾದ ಮುನಿಯಪ್ಪ ಬೆಳ್ಳಿ, ಶಂಕರಗೌಡ ದೇವರಮನಿ, ಅಮರ ಹಿರೇಮಠ, ಸುಕುಮುನಿ, ರಮೇಶ ತೆಕ್ಕಲಕೋಟೆ ಇದ್ದರು.