ಸಿಂಧನೂರಿನಲ್ಲಿ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಜಾಗೃತಿ ಜಾಥಾ ನಡೆಯಿತು. 
ಜಿಲ್ಲೆ

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ತಹಸೀಲ್ದಾರ್ ಅರುಣ ದೇಸಾಯಿ ಸಲಹೆ

ಸಿಂಧನೂರು: 18 ವರ್ಷ ತುಂಬಿದವರೆಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅರುಣ ದೇಸಾಯಿ ಸಲಹೆ ನೀಡಿದರು.

ಭಾರತೀಯ ಚುನಾವಣೆ ಆಯೋಗ, ತಾಲೂಕಾಡಳಿತ, ತಾಪಂ, ತಾಲೂಕು ಸ್ವೀಪ್ ಸಮಿತಿ ಆಶ್ರಯದಲ್ಲಿ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೆಚ್ಚಿನ ಮಾಹಿತಿಗಾಗಿ ತಹಸಿಲ್ ಕಚೇರಿಯ ಚುನಾವಣಾ ವಿಭಾಗ ಮತ್ತು ಬಿಎಲ್‌ಒಗಳನ್ನು ಸಂಪರ್ಕಿಸಬಹುದು. ಹೊಸ ಚುನಾವಣಾ ಚೀಟಿ, ತಿದ್ದುಪಡಿ ಮತ್ತು ಲೋಪದೋಷ ಸರಿಪಡಿಸಲು ಅವಕಾಶವಿದೆ ಎಂದು ತಿಳಿಸಿದರು.

ತಾಪಂ ಇಒ ಲಕ್ಷ್ಮೀದೇವಿ, ಬಿಇಒ ಶರಣಪ್ಪ ವಟಗಲ್, ಸಿಡಿಪಿಒ ಸುದೀಪ್‌ಕುಮಾರ, ಎಲ್ಲ ಬಿಎಲ್‌ಒಗಳು, ಅಧಿಕಾರಿಗಳು ಜಾಥಾದಲ್ಲಿ ಇದ್ದರು.