ಜಿಲ್ಲೆ

ಆರೋಗ್ಯ ಶಿಬಿರಗಳು ಬಡವರಿಗೆ ವರದಾನ

ಸಿಂಧನೂರು: ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನ ಎಂದು ಸಿಎಸ್‌ಎಫ್ ಫಾರ್ಮ್ ನಿರ್ದೇಶಕ ವಿನಯಕುಮಾರ ಕಾಲಿಕಾರ್ ಹೇಳಿದರು.

ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಬೀಜ ನಿಗಮ ನಿಯಮಿತ, ಕೇಂದ್ರೀಯ ರಾಜ್ಯ ಫಾರ್ಮ್ ಜವಳಗೇರಾ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಆರೋಗ್ಯ ಪರೀಕ್ಷೆಗೆ ಸಾವಿರಾರು ಕಳೆದುಕೊಳ್ಳಬೇಕಿದೆ. ಇದು ಬಡವರಿಗೆ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಫಾರ್ಮ್‌ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಶಿಬಿರ ಆಯೋಜಿಸಿದೆ ಎಂದರು.

ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತ್‌ರಾದ್ಯಸ್ವಾಮೀಜಿ ಹಾಗೂ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗಸ್ವಾಮೀಜಿ ಶಿಬಿರ ಉದ್ಘಾಟಿಸಿದರು. ಕನಕಗಿರಿ ಡಾ.ಚನ್ನಮಲ್ಲಸ್ವಾಮೀಜಿ, ಸಿರಗುಪ್ಪ ಬಸವಭೂಷಣ ಸ್ವಾಮೀಜಿ, ಜನರಲ್‌ಮ್ಯಾನೇಜರ್ ಕಪೂರ್‌ಚಂದ ಶರ್ಮ್, ಫಾರ್ಮ್ ಸೂಪರ್‌ಡೆಂಟ್ ಅನಿಲಕುಮಾರ, ಕೆಪಿಎಸ್‌ವಿಎಸ್ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಜೀವನೇಶ್ವರಯ್ಯ, ಡಾ.ಶಿವರಾಜ ಒಡೆಯರ,ಡಾ. ಸುನೀತಾ, ಡಾ.ಹಂಪಮ್ಮ, ಡಾ.ಶರಣಮ್ಮ, ಡಾ.ಪ್ರಮೋದ, ಡಾ.ಶ್ರೀಕಾಂತ ಕುಲಕರ್ಣಿ ಇತರರು ಇದ್ದರು. ಶಿಬಿರದಲ್ಲಿ ಸುಮಾರು 350 ಕ್ಕೂ ಜನರನ್ನು ಆರೋಗ್ಯ ತಪಾಸಣೆ ಮಾಡಲಾಯಿತು.