ಸಿಂಧನೂರಿನಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್‌ನಿಂದ ಜಿಲ್ಲಾ ಬೈಠಕ್ ಮಾಡಲಾಯಿತು. ವಿಎಚ್‌ಪಿ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಕಾರ್ಯದರ್ಶಿ ವಿನಾಯಕ್ ಜಿ. ತಲೆಗೇರಿ, ಕೆ.ಅಶೋಕ, ಪುಂಡಲೀಕ ದಳವಾಯಿ, ಮಲ್ಲಿಕಾರ್ಜುನ್ ಸತ್ತಿಗೇರಿ ಇತರರಿದ್ದರು. 
ಜಿಲ್ಲೆ

ವಿಎಚ್‌ಪಿ ಸಂಘಟನೆ ಬೈಠಕ್

ಸಿಂಧನೂರು: ನಗರದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ಮುಂಬರುವ ದಿನಗಳಲ್ಲಿ ನಡೆಸಲಿರುವ ಕಾರ್ಯಕ್ರಮ ಹಾಗೂ ಸಂಘಟನೆಯ ಕಾರ್ಯ ವಿಸ್ತಾರದ ಬಗ್ಗೆ ಮಂಗಳವಾರ ಜಿಲ್ಲಾ ಬೈಠಕ್ ಮಾಡಲಾಯಿತು.

ವಿಎಚ್‌ಪಿ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಉತ್ತರ ಪ್ರಾಂತ ಕಾರ್ಯದರ್ಶಿ ವಿನಾಯಕ್ ಜಿ. ತಲೆಗೇರಿ, ಬಳ್ಳಾರಿ ವಿಭಾಗ ಕಾರ್ಯದರ್ಶಿ ಕೆ.ಅಶೋಕ, ಬಜರಂಗದಳ ಉತ್ತರ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ, ಪ್ರಾಂತ ಧರ್ಮ ಪ್ರಸಾರ ಪ್ರಮುಖ ಮಲ್ಲಿಕಾರ್ಜುನ್ ಸತ್ತಿಗೇರಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಡಿ. ರವಿಕೃಷ್ಣ, ಕಾರ್ಯದರ್ಶಿ ರವಿಕುಮಾರ, ಜಿಲ್ಲಾ ಸಂಯೋಜಕ ಬಸವರಾಜ ಸಾಲುಗುಂದ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳಕ್ಕೆ ಪದಾಧಿಕಾರಿಗಳನ್ನು ನೇಮಿಸಿ, ಜವಾಬ್ದಾರಿಗಳನ್ನು ನೀಡಲಾಯಿತು.

ವಿಶ್ವ ಹಿಂದು ಪರಿಷತ್‌ಗೆ ದೇವರಾಜ್ ಪಾಟೀಲ್(ತಾಲೂಕಾಧ್ಯಕ್ಷ), ಶಿವಪ್ರಸಾದ್ ನೆಕ್ಕಂಟಿ (ಉಪಾಧ್ಯಕ್ಷ), ಕಿಶೋರ್ ಕುಮಾರ್ (ನಗರಾಧ್ಯಕ್ಷ), ವಿಶ್ವನಾಥ ಚೌಧರಿ (ಜಿಲ್ಲಾ ಧರ್ಮ ಪ್ರಚಾರ ಪ್ರಮುಖ), ಪ್ರವೀಣ್ ಭಗತ್‌ಸಿಂಗ್ (ಜಿಲ್ಲಾ ಮಾಧ್ಯಮ ಪ್ರಮುಖ), ಯಮನೂರು (ಬಜರಂಗದಳ ನಗರ ಸಹ ಸಂಯೋಜಕ), ಫಕೀರಪ್ಪ ಗೋಮರ್ಸಿ (ತಾಲೂಕು ಸಹ ಸಂಯೋಜಕ), ಹನುಮಂತ (ತಾಲೂಕು ಗೋರಕ್ಷಾ ಪ್ರಮುಖ), ವಿನಯ್ ಬಿ. (ತಾಲೂಕು ವಿದ್ಯಾರ್ಥಿ ಪ್ರಮುಖ), ಮೌನೇಶ (ನಗರ ವಿದ್ಯಾರ್ಥಿ ಪ್ರಮುಖ), ಪುಟ್ಟರಾಜ (ತಾಲೂಕು ಮಾಧ್ಯಮ ಪ್ರಮುಖ), ಅಸಮುತ್ಮಾಲೆ, ದಿಲೀಪ್ ಸರ್ಕಾರ್ (ಬಜರಂಗದಳ ಸಂಯೋಜಕರು) ಅವರನ್ನು ನೇಮಕ ಮಾಡಲಾಯಿತು.