ಸಿಂಧನೂರು: ತುಂಗಭದ್ರಾ ಯಾವುದೇ ಉಪಕಾಲುವೆಯಲ್ಲಿ ನೀರಿನ ಗೇಜ್ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.
ತುಂಗಭದ್ರಾ ಎಡದಂಡೆ 36 ರಿಂದ 54ನೇ ಉಪಕಾಲುವೆಯಲ್ಲಿ ನೀರಿನ ಹರಿವು ಹಾಗೂ ಗೇಜ್ ವೀಕ್ಷಿಸಿ ಸೋಮವಾರ ಸಂಜೆ ಮಾತನಾಡಿದರು. ನಾಲೆ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ತಲುಪಬೇಕು. ಗೇಜ್ ವ್ಯತ್ಯಾಸವಾಗದಂತೆ ಗಮನಹರಿಸಬೇಕು. ನಾಲೆ ಮೇಲ್ಭಾಗದಲ್ಲಿ ಯಥೇಚ್ಛವಾಗಿ ನೀರು ಹರಿಯಲು ಬಿಡಬಾರದು. ಮುಖ್ಯನಾಲೆಗೆ ಹರಿದು ಬರುವ ನೀರು, ಉಪಕಾಲುವೆಗೂ ಸಮರ್ಪಕವಾಗಿ ಹರಿಯುವಂತೆ ಕಾಳಜಿ ವಹಿಸಬೇಕು. ನಾಲೆ ಕೊನೆಯ ಭಾಗದ ರೈತರ ಬೆಳೆ ರಕ್ಷಿಸುವುದು ನಮ್ಮ ಹೊಣೆಯಾಗಿದೆ ಎಂದರು.