ಜಿಲ್ಲೆ

ಮಠಗಳು ಧಾರ್ಮಿಕ ಶ್ರದ್ಧಾಕೇಂದ್ರಗಳು

ಸಿಂಧನೂರು: ಬ್ರಾಹ್ಮಣರು ಮಠ, ಮತ ಭೇದಗಳನ್ನು ಮಾಡದೆ ಎಲ್ಲರೂ ಒಂದಾಗಿ ಎಲ್ಲರೊಂದಿಗೆ ಬೆರೆತರೆ ಗುರುರಾಜರು ಸಂಪ್ರೀತರಾಗುತ್ತಾರೆ ಎಂದು ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನಿವೃತ್ತ ಅಧಿಕಾರಿ ಅಪ್ಪಣ್ಣಾಚಾರ್ಯ ಕವಿತಾಳಂ ಹೇಳಿದರು.

ತುರ್ವಿಹಾಳ ಗ್ರಾಮದ ರಾಘವೇಂದ್ರಸ್ವಾಮಿಗಳ ಮಠದ ಬೃಂದಾವನ ಪ್ರತಿಷ್ಠಾಪನೆಯ 33ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ದೇಶದಲ್ಲಿ ಕೇವಲ ಶೇ.3 ಇರುವ ವಿಪ್ರ ಸಮುದಾಯ, ಮಠ ಭೇದಗಳನ್ನು ಮಾಡುತ್ತಿರುವುದು ಸರಿಯಲ್ಲ. ಎಲ್ಲ ಮಠಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿವೆ. ಅಂಗಾರ-ಅಕ್ಷತೆಗಳ ಆಧಾರದ ಮೇಲೆ ಮಠಗಳನ್ನು, ಮಠದವರನ್ನು ವಿಭಾಗ ಮಾಡಿ ಆ ಮಠ ದೊಡ್ಡದು, ಈ ಮಠ ಸಣ್ಣದು ಎಂದು ದೂಷಣೆ ಮಾಡುತ್ತಾ ಕಾಲ ಕಳೆಯುವುದು ತರವಲ್ಲ. ಎಲ್ಲರೂ ಒಂದಾಗಿ ದೇಶಕಟ್ಟುವ, ದೇಶಭಕ್ತಿಯನ್ನು ಹೆಚ್ಚಿಸುವ ಮೂಲಕ ಸಂಘಟಿತರಾಗಿ ಬದುಕಬೇಕು ಎಂದು ಹೇಳಿದರು.