ಹೆಡಗಿನಾಳ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹಸಿಗೊಂಡಿರುವ ಭೂಮಿ. 
ಜಿಲ್ಲೆ

ಸಿಂಧನೂರು ತಾಲೂಕಿನಲ್ಲಿ ಉತ್ತಮ ಮಳೆ

Kopala - Desk - Eraveni

ಸಿಂಧನೂರು: ತಾಲೂಕಿನಲ್ಲಿ ಶುಕ್ರವಾರ ಮಧ್ಯರಾತ್ರಿ ಉತ್ತಮ ಮಳೆ ಸುರಿದಿದ್ದು, ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಸಿಂಧನೂರು ನಗರದಲ್ಲಿ 15.1 ಎಂಎಂ., ತುರ್ವಿಹಾಳ 0.5, ಗುಂಜಳ್ಳಿ 4.5, ಬಾದರ್ಲಿ 32.8, ಕುನ್ನಟಗಿ 4.8, ವಲ್ಕಂದಿನ್ನಿ 22.2, ಸಾಲಗುಂದ 21.4, ಗೊರೇಬಾಳ 31.2, ಹೆಡಗಿನಾಳ 28.4 ಹಾಗೂ ಹುಡಾ ಹೋಬಳಿಯಲ್ಲಿ 20.4 ಎಂಎಂ ನಷ್ಟು ಮಳೆ ಆಗಿದೆ.

ಜಾಲಿಹಾಳ ಹೋಬಳಿಯಲ್ಲಿ ಮಳೆ ಆಗಿಲ್ಲ. ಏಕಾಏಕಿ ರಾತ್ರಿ ಮಳೆ ಸುರಿದಿದ್ದರಿಂದ ಹೋಬಳಿ ವ್ಯಾಪ್ತಿಯಲ್ಲಿ ಒಣಗಿ ಹಾಕಿದ್ದ ಭತ್ತದ ರಾಶಿಗೆ ನೀರು ನುಗ್ಗಿ ತೋಯ್ದಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಮಳೆಯಿಂದ ನಗರದ ಮೂರುಮೈಲ್‌ಕ್ಯಾಂಪ್‌ನಲ್ಲಿ ನಾಲ್ಕು ವಿದ್ಯುತ್ ಕಂಬ ಮುರಿದು ಬಿದ್ದಿವೆ. ಗ್ರಾಮೀಣ ಪ್ರದೇಶದಲ್ಲಿಯೂ ಅಲ್ಲಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.