ಸಿಂಧನೂರು ತಾಲೂಕು ಶ್ರೀನಿವಾಸಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಬಿಇಒ ಕಚೇರಿ ವ್ಯವಸ್ಥಾಪಕ ಬಸವರಾಜಪ್ಪಗೆ ಕೆಆರ್‌ಎಸ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ಯುವ ಘಟಕ ಉಪಾಧ್ಯಕ್ಷ ಕೆ.ನಿರುಪಾದಿ ಗೋಮರ್ಸಿ, ಜಗದೀಶ ಸುಲ್ತಾನಪುರ, ಅಯ್ಯಪ್ಪ ಇದ್ದರು. 
ಜಿಲ್ಲೆ

ಶ್ರೀನಿವಾಸ ಕ್ಯಾಂಪ್ ಶಾಲೆಗೆ ಶಿಕ್ಷಕರ ನೇಮಿಸಿ

ಸಿಂಧನೂರು: ತಾಲೂಕಿನ ಶ್ರೀನಿವಾಸ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಕೆಆರ್‌ಎಸ್ ಪಕ್ಷದಿಂದ ಬಿಇಒ ಕಚೇರಿ ವ್ಯವಸ್ಥಾಪಕ ಬಸವರಾಜಪ್ಪಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 110 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬರೇ ಶಿಕ್ಷಕರಿದ್ದರಿಂದ ಕಲಿಕಾ ಗುಣಮಟ್ಟ ಕೂಡ ಕುಸಿಯುತ್ತಿದೆ. ಮಾತ್ರವಲ್ಲ ಶಿಕ್ಷಕರ ಕೊರತೆಯಿಂದ ಮಕ್ಕಳ ಸಂಖ್ಯೆಯೂ ಕ್ಷೀಣಿಸಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕೂಡಲೇ ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೆ.ನಿರುಪಾದಿ ಗೋಮರ್ಸಿ, ಜಗದೀಶ ಸುಲ್ತಾನಪುರ, ಅಯ್ಯಪ್ಪ ಇತರರಿದ್ದರು.